ಹೆಚ್ಚಿನ ಟಾರಿಫ್ ಮೂಲಕ ಭಾರತ, ಅಮೆರಿಕಕ್ಕೆ ಭಾರಿ ಪೆಟ್ಟು ನೀಡುತ್ತಿದೆ, ಬ್ಯುಸಿನೆಸ್ ಬಗ್ಗೆ ಮೋದಿ ಜತೆ ಮಾತನಾಡುತ್ತೇನೆ: ಟ್ರಂಪ್

ಈ ಹಿಂದೆ ಭಾರತವನ್ನು ‘ಟಾರಿಫ್ ಕಿಂಗ್‌’(ಸುಂಕದ ರಾಜ) ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಅದನ್ನು ಪುನರುಚ್ಚರಿಸಿದ್ದು,  ಭಾರತ ಹಲವು ವರ್ಷಗಳಿಂದ ಅಮೆರಿಕದ ಉತ್ನನ್ನಗಳ ಮೇಲೆ ಹೆಚ್ಚಿನ ಆಮದು ಸುಂಕ....
ಮೋದಿ-ಟ್ರಂಪ್
ಮೋದಿ-ಟ್ರಂಪ್

ವಾಷಿಂಗ್ಟನ್: ಈ ಹಿಂದೆ ಭಾರತವನ್ನು ‘ಟಾರಿಫ್ ಕಿಂಗ್‌’(ಸುಂಕದ ರಾಜ) ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಅದನ್ನು ಪುನರುಚ್ಚರಿಸಿದ್ದು,  ಭಾರತ ಹಲವು ವರ್ಷಗಳಿಂದ ಅಮೆರಿಕದ ಉತ್ನನ್ನಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವ ಮೂಲಕ ಭಾರಿ ಪೆಟ್ಟು ನೀಡುತ್ತಿದೆ ಎಂದು ಭಾರತಕ್ಕೆ ಮೊದಲ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ದೂರಿದ್ದಾರೆ.

ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲೇನಿಯಾ ಅವರು ಫೆಬ್ರವರಿ 24 ಮತ್ತು 25 ರಂದು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. 

ಇಂದು ಕೀಪ್ ಅಮೆರಿಕ ಗ್ರೇಟ್ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ನಾನು ಮುಂದಿನ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಅವರು ಹಲವು ವರ್ಷಗಳಿಂದ ಹೆಚ್ಚಿನ ಸುಂಕ ವಿಧಿಸುವ ಮೂಲಕ ಪೆಟ್ಟು ನೀಡುತ್ತಿದ್ದಾರೆ. ಈ ಸಂಬಂಧ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ನಾನು ಪ್ರಧಾನಿ ಮೋದಿಯನ್ನು ನಿಜವಾಗಲೂ ಇಷ್ಟಪಡುತ್ತೇನೆ. ಭಾರತ ಭೇಟಿ ವೇಳೆ ಅವರೊಂದಿಗೆ ವ್ಯಾಪಾರದ ಬಗ್ಗೆ ಮಾತನಾಡುತ್ತೇನೆ. ಬ್ಯುಸಿನೆಸ್ ಬಗ್ಗೆ ಮಾತನಾಡಲು ನಮಗೆ ಸ್ವಲ್ಪ ಸಮಯ ಸಿಕ್ಕಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸುತ್ತಿರುವ ದೇಶ ಭಾರತ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್‌ ಭೇಟಿಯ ಹಿನ್ನೆಲೆಯಲ್ಲಿ, ಪ್ರಮುಖ ವ್ಯಾಪಾರ ಒಪ್ಪಂದದ ಪೂರ್ವಭಾವಿಯಾಗಿ ಭಾರತ ಮತ್ತು ಅಮೆರಿಕ ವ್ಯಾಪಾರ ಪ್ಯಾಕೇಜ್‌ಗೆ ಒಪ್ಪಿಗೆ ನೀಡಿವೆ ಎಂಬ ವರದಿಗಳು ಬಂದಿವೆ.

ನಾವು ಭಾರತಕ್ಕೆ ಹೋಗುತ್ತಿದ್ದೇವೆ ಮತ್ತು ನಾವು ಅಲ್ಲಿ ಪ್ರಚಂಡ ಒಪ್ಪಂದ ಮಾಡಿಕೊಳ್ಳಬಹುದು ಎಂದು ಟ್ರಂಪ್ ಇತ್ತೀಚಿಗೆ ಹೇಳಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com