ನೂರಾರು ರೋಗಿಗಳ ಜೀವ ರಕ್ಷಣೆಗಾಗಿ ವಿವಾಹ ಮುಂದೂಡಿದ್ದ ವೈದ್ಯ ಕೊರೋನಾ ವೈರಸ್'ಗೆ ಬಲಿ

ಮಾಹಾಮಾರಿ ಕೊರೋನಾ ವೈರಸ್ ಸೋಂಕಿಗೊಳಗಾದ ರೋಗಿಗಳ ಜೀವ ರಕ್ಷಣೆಗಾಗಿ ತನ್ನ ವಿವಾಹವನ್ನೇ ಮುಂದೂಡಿದ್ದ ಚೀನಾದ ವೈದ್ಯರೊಬ್ಬರು ಸ್ವತಃ ಸೋಂಕಿಗೆ ಬಲಿಯಾಗಿರುವ ಘಟನೆ ವುಹಾನ್ ಪ್ರಾಂತ್ಯದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಮಾಹಾಮಾರಿ ಕೊರೋನಾ ವೈರಸ್ ಸೋಂಕಿಗೊಳಗಾದ ರೋಗಿಗಳ ಜೀವ ರಕ್ಷಣೆಗಾಗಿ ತನ್ನ ವಿವಾಹವನ್ನೇ ಮುಂದೂಡಿದ್ದ ಚೀನಾದ ವೈದ್ಯರೊಬ್ಬರು ಸ್ವತಃ ಸೋಂಕಿಗೆ ಬಲಿಯಾಗಿರುವ ಘಟನೆ ವುಹಾನ್ ಪ್ರಾಂತ್ಯದಲ್ಲಿ ನಡೆದಿದೆ. 

ಮಾರಕ ಕೊರೋನಾ ವೈರಸ್ ಚೀನಾವನ್ನು ಎಡೆಬಿಡದೆ ಕಾಡುತ್ತಿದ್ದು, ಈ ವರೆಗೂ ವೈರಸ್'ಗೆ 2,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ವೈರಸ್ ತಡೆಯಲು ಅವಿರತ ಶ್ರಮ ಪಡುತ್ತಿರುವ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಸಾವಿಗೀಡಾದ 9ನೇ ಪ್ರಕರಣ ಇದಾಗಿದೆ. 

ವುಹಾನ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಪೆಂಗ್ ಯಿನ್ಹುವಾ ಮೃತಪಟ್ಟ ವೈದ್ಯರಾಗಿದ್ದಾರೆ. ಶ್ವಾಸ ಸಂಬಂಧಿ ಸೋಂಕುಗಳ ತಜ್ಞ ವೈದ್ಯರಾಗಿದ್ದ ಪೆಂಗ್ ಅವರಿಗೆ ವುಹಾನ್'ನ ಜಿಯಾಂಗ್ ಕ್ಸಿಯಾ ಜಿಲ್ಲಯ ಫಸ್ಟ್ ಪೀಪಲ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಸೋಂಕು ತಗುಲಿರಬೇಕೆಂದು ಶಂಕಿಸಲಾಗಿದೆ. 

ಸೋಂಕು ತಗುಲಿದ ಹಿನ್ನೆಲೆಯಲ್ಲಿ ಜನವರಿ 25 ರಂದು ಪೆಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜನವರು 30 ರಂದು ಪರಿಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ವುಹಾನ್ ಜಿನ್ಯಿಂಟನ್ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಈ ನಡುವೆ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗ ತ್ಯಾಗ ಬಲಿದಾನ ನೀಡುತ್ತಿರುವ ವೈದ್ಯರಿಗೆ ಹುತಾತ್ಮರೆಂದು ಗೌರವ ಸಲ್ಲಿಸುವಂತೆ ಚೀನಾ ಆರೋಗ್ಯ ಇಲಾಖೆ, ಚೀನಾ ಸರ್ಕಾರದ ಬಳಿ ಮನವಿ ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com