ಇರಾನ್ ದಾಳಿಯಿಂದ ಮೆದುಳಿನ ಆಘಾತಕ್ಕೊಳಗಾದ ಅಮೆರಿಕ ಯೋಧರ ಸಂಖ್ಯೆ110 ಕ್ಕೆ ಏರಿಕೆ

ಇರಾಕ್ ನೆಲೆಗಳ ಮೇಲೆ ಇರಾನ್ ನ ಕ್ಷಿಪಣಿ ದಾಳಿಯ ನಂತರ ಆಘಾತಕಾರಿ ಮಿದುಳಿನ ಗಾಯಗಳಿಗೆ (ಟಿಬಿಐ) ಒಳಗಾದ ಅಮೆರಿಕ ಯೋಧರ ಸಂಖ್ಯೆ 110 ಕ್ಕೆ ಏರಿದೆ ಎಂದು ಪೆಂಟಗನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇರಾನ್ ಕ್ಷಿಪಣಿ ದಾಳಿ ನಡೆಸಿರುವ ಸ್ಥಳ
ಇರಾನ್ ಕ್ಷಿಪಣಿ ದಾಳಿ ನಡೆಸಿರುವ ಸ್ಥಳ

ವಾಷಿಂಗ್ಟನ್: ಇರಾಕ್ ನೆಲೆಗಳ ಮೇಲೆ ಇರಾನ್ ನ ಕ್ಷಿಪಣಿ ದಾಳಿಯ ನಂತರ ಆಘಾತಕಾರಿ ಮಿದುಳಿನ ಗಾಯಗಳಿಗೆ (ಟಿಬಿಐ) ಒಳಗಾದ ಅಮೆರಿಕ ಯೋಧರ ಸಂಖ್ಯೆ 110 ಕ್ಕೆ ಏರಿದೆ ಎಂದು ಪೆಂಟಗನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದುವರೆಗೆ 110 ಭದ್ರತಾ ಸಿಬ್ಬಂದಿಗೆ ಲಘು ಟಿಬಿಐ ರೋಗವಿರುವುದು ದೃಢಪಟ್ಟಿದೆ. ನಿನ್ನೆ ವರದಿಯಾದ ಸಂಖ್ಯೆಗಿಂತ ಇಂದು ಒಬ್ಬ ಯೋಧ ಹೆಚ್ಚಾಗಿ ಸೇರ್ಪಡೆಯಾಗಿದ್ದಾರೆ. ಟಿಬಿಐ ರೋಗನಿರ್ಣಯ ಮಾಡಲಾಗಿರುವ ಯೋಧರ ಪೈಕಿ 77 ಮಂದಿ ಸದ್ಯ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಫೆ 10 ರಂದು, ಪೆಂಟಗನ್ ಬಿಡುಗಡೆ ಮಾಡಿದ ಪ್ರಕಟಣೆಯಂತೆ ಟಿಬಿಐ ರೋಗನಿರ್ಣಯ ಮಾಡಿದ ಅಮೆರಿಕ ಯೋಧರ ಸಂಖ್ಯೆ 109ನಷ್ಟಿತ್ತು. ಇದು ಜನವರಿ ಅಂತ್ಯದ ವರದಿಗೆ ಹೋಲಿಸಿದರೆ 45 ರಷ್ಟು ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com