ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ನಾಲ್ವರಿಗೆ ಮಾರಕ ಕೊರೋನಾ ಸೋಂಕು ದೃಢ: ರಾಯಭಾರ ಕಚೇರಿ
ಜಪಾನ್ ಕರಾವಳಿಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಕ್ರೂಸ್ ಹಡಗಿನಲ್ಲಿರುವ ಇನ್ನೂ ನಾಲ್ವರು ಭಾರತೀಯ ಸಿಬ್ಬಂದಿಗಳಿಗೆ ಮಾರಕ ಕೊರೋನಾವೈರಸ್ ಇರುವುದು ಸಾಬೀತಾಗಿದೆ. ಅವರುಗಳಿಗೆ ನಡೆಸಲಾಗಿದ್ದ ವೈದ್ಯಕೀಯ ಪರೀಕ್ಷೆಗಳಲ್ಲಿ ಕೊರೋನಾವೈರಸ್ ಪಾಸಿಟಿವ್ ಎಂದು ವರದಿ ಬಂದಿದೆ. ಇದರೊಡನೆ ಹಡಗಿನಲ್ಲಿ ವೈರಸ್ ಸೋಂಕಿಗೆ ಒಳಗಾದ ಒಟ್ಟು ಭಾರತೀಯರ ಸಂಖ್ಯೆ 12 ತಲುಪಿದೆ ಎಂದು ಭಾರತೀಯ ರಾಯ
Published: 23rd February 2020 05:43 PM | Last Updated: 23rd February 2020 05:43 PM | A+A A-

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ನಾಲ್ವರಿಗೆ ಮಾರಕ ಕೊರೋನಾ ಸೋಂಕು ದೃಢ: ರಾಯಭಾರ ಕಚೇರಿ
ಟೋಕಿಯೋ: ಜಪಾನ್ ಕರಾವಳಿಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಕ್ರೂಸ್ ಹಡಗಿನಲ್ಲಿರುವ ಇನ್ನೂ ನಾಲ್ವರು ಭಾರತೀಯ ಸಿಬ್ಬಂದಿಗಳಿಗೆ ಮಾರಕ ಕೊರೋನಾವೈರಸ್ ಇರುವುದು ಸಾಬೀತಾಗಿದೆ. ಅವರುಗಳಿಗೆ ನಡೆಸಲಾಗಿದ್ದ ವೈದ್ಯಕೀಯ ಪರೀಕ್ಷೆಗಳಲ್ಲಿ ಕೊರೋನಾವೈರಸ್ ಪಾಸಿಟಿವ್ ಎಂದು ವರದಿ ಬಂದಿದೆ. ಇದರೊಡನೆ ಹಡಗಿನಲ್ಲಿ ವೈರಸ್ ಸೋಂಕಿಗೆ ಒಳಗಾದ ಒಟ್ಟು ಭಾರತೀಯರ ಸಂಖ್ಯೆ 12 ತಲುಪಿದೆ ಎಂದು ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.
ಕಳೆದ ವಾರ ಕ್ಯಾರೆಂಟೈನ್ ಅವಧಿ ಮುಗಿದ ನಂತರ ಮಾರಕ ಕಾಯಿಲೆಯ ಯಾವುದೇ ಲಕ್ಷಣಗಳನ್ನು ತೋರಿಸದ ಪ್ರಯಾಣಿಕರು ಡೈಮಂಡ್ ಪ್ರಿನ್ಸೆಸ್ ನಲ್ಲಿ ಡಿಬೋರ್ಡ್ ಆಗಲು ಪ್ರಾರಂಭಿಸಿದ್ದರು.
ಮುಖ್ಯ ಕ್ಯಾಬಿನೆಟ್ ಸೆಕ್ರೆಟರಿ ಯೋಶಿಹಿದೆ ಸುಗಾ ಮಾತನಾಡಿ, ಪ್ರಯಾಣಿಕರ ಇಳಿಸುವಿಕೆ ಮುಗಿದ ಬಳಿಕವೂ 1,000 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಹಡಗಿನಲ್ಲಿ ಉಳಿಯುತ್ತಾರ ಎಂದರು. ಶನಿವಾರಸೋಂಕಿತ ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಸುಮಾರು 100 ಪ್ರಯಾಣಿಕರಿಗೆ ಹಡಗಿಗೆ ಡಿಬೋರ್ಡ್ ಆಗಲು ಅನುಮತಿಸಲಾಗಿದೆ."ದುರದೃಷ್ಟವಶಾತ್ ಮಾರಕ ಕೊರೋನಾವೈರಸ್ ಹೊಂದಿರುವವರ ಪೈಕಿ 4 ಭಾರತೀಯ ಸಿಬ್ಬಂದಿಗಳೂ ಸೇರಿದ್ದಾರೆ"ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಈ ಹಿಂದೆ, ಎಂಟು ಭಾರತೀಯರಿಗೆ ಕೊರೋನಾವೈರಸ್ ಇರುವುದು ಖಾತ್ರಿಯಾಗಿತ್ತು.ಇನ್ನು ಎಲ್ಲಾ 12 ಭಾರತೀಯರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳೀದುಬಂದಿದೆ.ಆರೋಗ್ಯವಂತ ಪ್ರಯಾಣಿಕರೆಲ್ಲರೂ ಇಳಿದ ನಂತರ ಇನ್ನೂ ಹಡಗಿನಲ್ಲಿರುವ ಭಾರತೀಯರನ್ನು ಇತರರೊಂದಿಗೆ ವೈರಸ್ ಸೋಂಕಿಗೆ ಪರೀಕ್ಷಿಸಲಾಗುವುದು ಎಂದು ರಾಯಭಾರ ಕಚೇರಿ ಶನಿವಾರ ತಿಳಿಸಿತ್ತು.
ಫೆಬ್ರವರಿ 3 ರಂದು ಟೋಕಿಯೊ ಬಳಿಯ ಯೊಕೊಹಾಮಾ ಬಂದರಿನಲ್ಲಿ ಹಡಗಿನಲ್ಲಿ 132 ಸಿಬ್ಬಂದಿ ಮತ್ತು 6 ಪ್ರಯಾಣಿಕರು ಸೇರಿದಂತೆ ಒಟ್ಟು 138 ಭಾರತೀಯರು ಸೇರಿ 3,711 ಜನರು ಪ್ರಯಾಣಿಸುತ್ತಿದ್ದರು.