ಚೀನಾ ಆಯ್ತು, ಈಗ ಕೊರಿಯಾದಲ್ಲೂ ಮರಣ ಮೃದಂಗ ಆರಂಭಿಸಿದ ಕೊರೋನಾ; 7 ಸಾವು, 760 ಕ್ಕೂ ಹೆಚ್ಚು ಮಂದಿಗೆ ಸೋಂಕು!

ಚೀನಾದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದ ಮಾರಣಾಂತಿಕ ಕೊರೋನಾ ವೈರಸ್ ಇದೀಗ ದಕ್ಷಿಣ ಕೊರಿಯಾಗೂ ಕಾಲಿಟ್ಟಿದೆ.
ಕೊರಿಯಾದಲ್ಲೂ ಕೊರೋನಾ ಮರಣ ಮೃದಂಗ
ಕೊರಿಯಾದಲ್ಲೂ ಕೊರೋನಾ ಮರಣ ಮೃದಂಗ

ಸಿಯೋಲ್: ಚೀನಾದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದ ಮಾರಣಾಂತಿಕ ಕೊರೋನಾ ವೈರಸ್ ಇದೀಗ ದಕ್ಷಿಣ ಕೊರಿಯಾಗೂ ಕಾಲಿಟ್ಟಿದೆ.

ಹೌದು.. ದಕ್ಷಿಣ ಕೊರಿಯಾದಲ್ಲಿ ಈ ವರೆಗೂ 760 ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದು, ಏಳು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಅಲ್ಲಿನ ರೋಗ ನಿಯಂತ್ರಣ ಮತ್ತು ಸಂರಕ್ಷಣಾ ಕೇಂದ್ರ ಮಾಹಿತಿ ನೀಡಿದ್ದು, ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ 763 ಪ್ರಕರಣಗಳು ದಾಖಲಾಗಿದ್ದು ಏಳು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಭಾನುವಾರ ಒಂದೇ ದಿನ 161 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಅಂತೆಯೇ ಈ ಕೇಂದ್ರದ ಸೋಮವಾರದ ವರದಿಯಲ್ಲಿ 161 ಹೊಸ ಪ್ರಕರಣಗಳ ಬಗ್ಗೆ ವಿವರಗಳಿದ್ದು 18 ಜನರು ಗುಣಮುಖರಾಗಿದ್ದಾರೆ ಎಂದೂ ಹೇಳಲಾಗಿದೆ. 8,720 ಜನರ ವೈದ್ಯಕೀಯ ಪರೀಕ್ಷೆ ಪ್ರಗತಿಯಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಚೀನಾ ನಡುವಿನ ಬಹುತೇಕ ಎಲ್ಲ ವಿಮಾನಗಳ ರದ್ದು ಮಾಡಲಾಗಿದ್ದು, ದಕ್ಷಿಣ ಕೊರಿಯಾ ಸರ್ಕಾರ ಚೀನಾಗೆ ಭೇಟಿ ನೀಡುವ ತನ್ನ ನಾಗರಿಕರಿಗೆ ಮಾರ್ಗದರ್ಶಿ ಸಲಹೆಗಳನ್ನು ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com