ಮಲೇಷಿಯಾ ಪ್ರಧಾನಿ ಮಹತಿರ್ ಮೊಹಮದ್ ರಾಜೀನಾಮೆ

ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮದ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.
ಹತಿರ್ ಮೊಹಮದ್
ಹತಿರ್ ಮೊಹಮದ್

ಕೌಲಾಲಂಪುರ: ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮದ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.

‘ಮಹತಿರ್ ಮೊಹಮದ್ ಅವರು ಇಂದು ಮಲೇಷ್ಯಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ರಾಜೀನಾಮೆ ಪತ್ರವನ್ನು ಮಧ್ಯಾಹ್ನ ಮಲೇಷಿಯಾದ ರಾಜರಿಗೆ ಸಲ್ಲಿಸಲಾಗಿದೆ’ ಎಂದು ಪ್ರಧಾನಮಂತ್ರಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರತಿಪಕ್ಷಗಳು ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಭಾನುವಾರ ಸಭೆಗಳನ್ನು ನಡೆಸುವ ಮೂಲಕ ರಾಜಕೀಯ ಮರುಮೈತ್ರಿಯನ್ನು ಯೋಜಿಸುತ್ತಿವೆ ಎಂಬ ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
  
ಪಕಾಟನ್ ಹರಪನ್ ಎಂದು ಕರೆಯಲ್ಪಡುವ ‘ಅಲೈಯನ್ಸ್ ಆಫ್ ಹೋಪ್’ ಒಕ್ಕೂಟ ಮೇ 2018 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ನಂತರ ಮಹತಿರ್ ಮಲೇಷ್ಯಾ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದರು.  ಮಹತಿರ್ ಅವರು ಪಕಾಟನ್ ಹರಪನ್‌ ಒಕ್ಕೂಟದ ನಾಲ್ಕು ಮೈತ್ರಿ ಪಕ್ಷಗಳಲ್ಲಿ ಒಂದಾದ ಪ್ರಿಬುಮಿ ಬರ್ಸಾಟು ಮಲೇಷ್ಯಾ (ಪಿಪಿಬಿಎಂ)ನ ಅಧ್ಯಕ್ಷರೂ ಆಗಿದ್ದಾರೆ.
  
ಮಹತಿರ್ ಅವರ ರಾಜೀನಾಮೆ ಹೇಳಿಕೆಗೂ ಮುನ್ನ ಪಿಪಿಬಿಎಂ ಅಧ್ಯಕ್ಷ ಮುಹಿದ್ದೀನ್ ಯಾಸಿನ್ ಹೇಳಿಕೆ ನೀಡಿ, ಫೆ. 23 ರಂದು ನಡೆದ ಸಭೆಯ ನಂತರ ಪಕಟಾನ್ ಹರಪನ್ ಒಕ್ಕೂಟವನ್ನು ತ್ಯಜಿಸಲು ಪಕ್ಷದ ಸರ್ವೋಚ್ಛ ಮಂಡಳಿ ನಿರ್ಧರಿಸಿದೆ ಎಂದು  ತಿಳಿಸಿದ್ದಾರೆ.
  
‘ದೇಶದ ಸದ್ಯದ ಮತ್ತು ಭವಿಷ್ಯದ ರಾಜಕೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.’ ಎಂದು ಮುಹಿದ್ದೀನ್ ಯಾಸಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com