ಕೊರಿಯಾದಲ್ಲಿ ಕೊರೋನಾ ವೈರಸ್: ಸಾವಿನ ಸಂಖ್ಯೆ 10ಕ್ಕೇರಿಕೆ, 1000 ಗಡಿಯತ್ತ ಸೋಂಕು ಪೀಡಿತರು

ಚೀನಾದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದ ಮಾರಣಾಂತಿಕ ಕೊರೋನಾ ವೈರಸ್ ಇದೀಗ ದಕ್ಷಿಣ ಕೊರಿಯಾಗೂ ಕಾಲಿಟ್ಟಿದ್ದು, ದಕ್ಷಿಣ ಕೊರಿಯಾದಲ್ಲಿ ಸಾವಿನ ಸಂಖ್ಯೆ 10ಕ್ಕೇರಿಕೆಯಾಗಿದೆ.
ಕೊರಿಯಾದಲ್ಲೂ ಕೊರೋನಾ ಮರಣ ಮೃದಂಗ
ಕೊರಿಯಾದಲ್ಲೂ ಕೊರೋನಾ ಮರಣ ಮೃದಂಗ

ಸಿಯೋಲ್: ಚೀನಾದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದ ಮಾರಣಾಂತಿಕ ಕೊರೋನಾ ವೈರಸ್ ಇದೀಗ ದಕ್ಷಿಣ ಕೊರಿಯಾಗೂ ಕಾಲಿಟ್ಟಿದ್ದು, ದಕ್ಷಿಣ ಕೊರಿಯಾದಲ್ಲಿ ಸಾವಿನ ಸಂಖ್ಯೆ 10ಕ್ಕೇರಿಕೆಯಾಗಿದೆ.

ಇಂದು ಮತ್ತೆ ಮೂರು ಮಂದಿ ಸೋಂಕು ಪೀಡಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಆ ಮೂಲಕ ದಕ್ಷಿಣ ಕೊರಿಯಾದಲ್ಲಿ ಕೊರೋನಾ ವೈರಸ್ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಅಂತೆಯೇ ಕೊರಿಯಾದಲ್ಲಿ ಮತ್ತೆ ಮಂಗಳವಾರ ಕೊರೊನವೈರಸ್ ನ 144 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 977ಕ್ಕೆ ಏರಿಕೆಯಾಗಿದೆ. ಆ ಮೂಲಕ ಕೊರಿಯಾದಲ್ಲಿ ಸೋಂಕು ಪೀಡಿತರ ಸಂಖ್ಯೆ 1000 ಗಡಿ ತಲುಪುತ್ತಿದೆ.

ದಕ್ಷಿಣ ಕೊರಿಯಾದ ರೋಗ ನಿಯಂತ್ರಣ ಮತ್ತು ಸಂರಕ್ಷಣಾ ಕೇಂದ್ರ ಈ ಕುರಿತಂತೆ ಮಾಹಿತಿ ನೀಡಿದ್ದು, ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ 977 ಪ್ರಕರಣಗಳು ದಾಖಲಾಗಿದ್ದು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ. ಮಂಗಳವಾರ ಒಂದೇ ದಿನ 144 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com