ಆಸ್ಟ್ರಿಯಾದಲ್ಲಿ ಮೊದಲ ಎರಡು ಕೊರೊನಾ ಸೋಂಕು ಪತ್ತೆ

ಆಸ್ಟ್ರಿಯಾದಲ್ಲಿ ಮಂಗಳವಾರ ಮೊದಲ ಬಾರಿಗೆ ಎರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಆಸ್ಟ್ರಿಯಾದಲ್ಲಿ ಮೊದಲ ಎರಡು ಕೊರೊನಾ ಸೋಂಕು ಪತ್ತೆ
ಆಸ್ಟ್ರಿಯಾದಲ್ಲಿ ಮೊದಲ ಎರಡು ಕೊರೊನಾ ಸೋಂಕು ಪತ್ತೆ

ವಿಯೆನ್ನಾ: ಆಸ್ಟ್ರಿಯಾದಲ್ಲಿ ಮಂಗಳವಾರ ಮೊದಲ ಬಾರಿಗೆ ಎರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಟ್ಯೋರೊಲ್ ನಲ್ಲಿ ಸುಮಾರು 24 ವರ್ಷದ ಇಬ್ಬರಲ್ಲಿ ಕೊರೊನಾ ಸೋಂಕಿರುವುದು ಖಚಿತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಇಬ್ಬರು ಸ್ವಯಂಪ್ರೇರಿತರಾಗಿ ವೈದ್ಯಕೀಯ ಕೇಂದ್ರವನ್ನು ಸಂಪರ್ಕಿಸಿ ತಮ್ಮಲ್ಲಿ ಕಂಡುಬರುತ್ತಿರುವ ಲಕ್ಷಣಗಳ ಬಗ್ಗೆ ವಿವರಿಸಿದ್ದರು. ಅವರು ಜ್ವರದಿಂದ ಬಳಲುತ್ತಿದ್ದು ಅವರ ಸ್ಥಿತಿ ಗಂಭೀರವಾಗಿಲ್ಲ ಎಂದೂ ಹೇಳಲಾಗಿದೆ. ಅವರಿಬ್ಬರನ್ನೂ ಚಿಕಿತ್ಸಾಲಯದಲ್ಲಿ ಪ್ರತ್ಯೇಕವಾಗಿರಿಸಲಾಗಿದ್ದು ಈ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಪ್ರತ್ಯೇಕ ಕ್ಲಿನಿಕ್ ತೆರೆಯಲಾಗುವುದು. 

ಜೊತೆಗೆ ಸೋಂಕಿನ ವಿವರಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜನರ ಸಂದೇಹಗಳಿಗೆ ಉತ್ತರಿಸಲು ಪ್ರತ್ಯೇಕ ಹಾಟ್ಲೈನ್ ಸಂಖ್ಯೆಯನ್ನೂ ಈಗಾಗಲೇ ತೆರೆಯಲಾಗಿದೆ. ಜೊತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿನ ನಿವಾಸಿ ವೈದ್ಯರಿಂದ ಜನರು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com