ಅಮೇರಿಕದ ವಿಸ್ಕಾನ್ಸಿನ್ ನಲ್ಲಿ ಗುಂಡಿನ ದಾಳಿ; ಏಳು ಮಂದಿ ಸಾವು

ಅಮೇರಿಕಾದ ರಾಜ್ಯ ವಿಸ್ಕಾನ್ಸಿನ್‌ ನಲ್ಲಿರುವ ಬ್ರೂವರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಮಿಲ್ವಾಕೀ ದಿನಪತ್ರಿಕೆ ಸೆಂಟಿನೆಲ್ ವರದಿ ಮಾಡಿದೆ.
ವಿಸ್ಕಾನ್ಸಿನ್ ನಲ್ಲಿ ಗುಂಡಿನ ದಾಳಿ: ಚಿತ್ರಕೃಪೆ ಸಿಎನ್ ಬಿಸಿ
ವಿಸ್ಕಾನ್ಸಿನ್ ನಲ್ಲಿ ಗುಂಡಿನ ದಾಳಿ: ಚಿತ್ರಕೃಪೆ ಸಿಎನ್ ಬಿಸಿ

ವಾಷಿಂಗ್ಟನ್: ಅಮೇರಿಕಾದ ರಾಜ್ಯ ವಿಸ್ಕಾನ್ಸಿನ್‌ ನಲ್ಲಿರುವ ಬ್ರೂವರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಮಿಲ್ವಾಕೀ ದಿನಪತ್ರಿಕೆ ಸೆಂಟಿನೆಲ್ ವರದಿ ಮಾಡಿದೆ.

ಮಿಲ್ವಾಕೀ ನಗರದ ಮೊಲ್ಸನ್ ಕೂರ್ಸ್ ಬಿಯರ್ ಬ್ರೂವರಿಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯು ಅನೇಕ ಮೂಲಗಳನ್ನು ಉಲ್ಲೇಖಿಸಿದೆ. ಬ್ರೂವರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೇ ಏಕಾಏಕಿ ಗುಂಡಿನ ದಾಳಿ ನಡೆಸಿ ಕೊನೆಗೆ ತಾನೂ ಕೂಡ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.

ನಿತ್ಯದಂತೆಯೇ ಇಂದೂ ಕೂಡ ಕೆಲಸಕ್ಕಾಗಿ ಬಂದಿದ್ದ ಕಾರ್ಮಿಕರು ಕೆಲಸ ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ಆಗುತ್ತಿದ್ದಾಗ ಓರ್ವ ಕಾರ್ಮಿಕ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ತಾನೂ ಕೂಡ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಮಿಲ್ವಾಕೀ ಮೇಯರ್ ಟಾಮ್ ಬ್ಯಾರೆಟ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com