ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ

ಟರ್ಕಿ ಗಡಿಯಲ್ಲಿ ಸಿರಿಯಾ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಛ 34 ಮಂದಿ ಟರ್ಕಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡಮಾಸ್ಕಸ್: ಟರ್ಕಿ ಗಡಿಯಲ್ಲಿ ಸಿರಿಯಾ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಛ 34 ಮಂದಿ ಟರ್ಕಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಿರಿಯಾದ ವಾಯುವ್ಯ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಬಂಡುಕೋರರ ವಶದಲ್ಲಿರುವ ಪ್ರದೇಶಗಳ ಮೇಲೆ ಸಿರಿಯಾ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ ಕನಿಷ್ಛ 34 ಟರ್ಕಿ ಸೈನಿಕರು ಸಾವನ್ನಪ್ಪಿರುವುದಾಗಿ ಯುದ್ಧ ಮಾನಿಟರ್ ವರದಿ ಮಾಡಿದೆ.

ರಷ್ಯಾ ಮತ್ತು ಸಿರಿಯನ್ ವೈಮಾನಿಕ ದಾಳಿಗಳು ಇಡ್ಲಿಬ್ ಗ್ರಾಮಾಂತರ ಪ್ರದೇಶದಲ್ಲಿರುವ ಬಾರಾ ಮತ್ತು ಬಿಲಿಯನ್ ಪಟ್ಟಣಗಳ ನಡುವಿನ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆಸಿದ್ದು ಹೆಚ್ಚಿನ ಸಾವುನೋವುಗಳ ವರದಿಗಳ ನಡುವೆಯೂ 34 ಟರ್ಕಿಶ್ ಸೈನಿಕರನ್ನು ದಾಳಿಯಲ್ಲಿ ಕೊಂದಿವೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಇಡ್ಲಿಬ್‌ನಲ್ಲಿನ ಬಂಡುಕೋರರಿಗೆ ಟರ್ಕಿ ಸೇನೆ ವಿಮಾನ ನಿಗ್ರಹ ಮೊಬೈಲ್ ರಾಕೆಟ್ ಲಾಂಚರ್ ಗಳನ್ನು ನೀಡುತ್ತಿದೆ ಎಂಬ ರಷ್ಯಾದ ಗಂಭೀರ ಆರೋಪದ ಮೇರೆಗೆ ಸಿರಿಯಾ ಸೇನೆ ಈ ವಾಯುದಾಳಿ ನಡೆಸಿದೆ ಎನ್ನಲಾಗಿದೆ. ಪ್ರಸ್ತುತ ಸಿರಿಯಾ ಮತ್ತು ಟರ್ಕಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಲೆಸಿದ್ದು, ಟರ್ಕಿ ಸೇನೆ ಕೂಡ ತಿರುಗೇಟು ನೀಡುವ ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com