ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧ: ಅಮೆರಿಕಾಗೆ ಸೆಡ್ಡು ಹೊಡದ ಉತ್ತರ ಕೊರಿಯಾ

ಅಣ್ವಸ್ತ್ರ ಮತ್ತು ಅಂತರಾಷ್ಟ್ರೀಯ ಕ್ಷಿಪಣಿ ಪರೀಕ್ಷೆಗೆ ಹೇರಿಕೊಂಡಿದ್ದ ಸ್ವಯಂ ನಿಷೇದ ಹಿಂಪಡೆಯುವುದಾಗಿ ಪ್ರಕಟಿಸಿರುವ ಉತ್ತರ ಕೊರಿಯಾ ಮುಖಂಡ ಕಿಮ್ ಜೋಂಗ್ ಉನ್, ಶೀಘ್ರದಲ್ಲೇ ಹೊಸ ಅಸ್ತ್ರ ಪ್ರಯೋಗಿಸುವುದಾಗಿ ಬೆದರಿಕೆ ಹಾಕಿದ್ದಾರೆ. 
ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧ: ಅಮೆರಿಕಾಗೆ ಸೆಡ್ಡು ಹೊಡದ ಉತ್ತರ ಕೊರಿಯಾ
ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧ: ಅಮೆರಿಕಾಗೆ ಸೆಡ್ಡು ಹೊಡದ ಉತ್ತರ ಕೊರಿಯಾ

ಸೋಲ್: ಅಣ್ವಸ್ತ್ರ ಮತ್ತು ಅಂತರಾಷ್ಟ್ರೀಯ ಕ್ಷಿಪಣಿ ಪರೀಕ್ಷೆಗೆ ಹೇರಿಕೊಂಡಿದ್ದ ಸ್ವಯಂ ನಿಷೇದ ಹಿಂಪಡೆಯುವುದಾಗಿ ಪ್ರಕಟಿಸಿರುವ ಉತ್ತರ ಕೊರಿಯಾ ಮುಖಂಡ ಕಿಮ್ ಜೋಂಗ್ ಉನ್, ಶೀಘ್ರದಲ್ಲೇ ಹೊಸ ಅಸ್ತ್ರ ಪ್ರಯೋಗಿಸುವುದಾಗಿ ಬೆದರಿಕೆ ಹಾಕಿದ್ದಾರೆ. 

ಈ ಹಿಂದೆ ಉ.ಕೊರಿಯಾ, ಅಮೆರಿಕಾದ ಸಂಪೂರ್ಣ ಭೂ ಭಾಗವನ್ನು ತಲುಪಬಲ್ಲ ಕ್ಷಿಪಣಿ ಪರೀಕ್ಷಿಸಿತ್ತು. ಅಲ್ಲದೆ, ಆರು ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ, ಕಳೆದ 2 ವರ್ಷಗಳಲ್ಲಿ ಟ್ರಂಪ್ ಮತ್ತು ಕಿಮ್ ನಡುವೆ ನಡೆದ 3 ಸುತ್ತಿನ ಮಾತುಕತೆ ಬಳಿಕ ಇಂತಹ ಪರೀಕ್ಷೆಗಳ ಮೇಲೆ ಸ್ವಯಂ ನಿಷೇಧಕ್ಕೆ ಉತ್ತರ ಕೊರಿಯಾ ನಿರ್ಧರಿಸಿತ್ತು. 

ಆದರೆ, ಕಳೆದ ಫೆಬ್ರವರಿಯಲ್ಲಿ ಹೆನೋಯ್ ಶೃಂಗ ಮುರಿದು ಬಿದ್ದ ಬಳಿಕ ಉಭಯ ದೇಶಗಳ ನಡುವಿನ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಆಕ್ರೋಶಗೊಂಡಿರುವ ಕಿಮ್, ಸ್ವಯಂ ನಿಷೇಧ ಹಿಂಪಡೆಯುವ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕಿಮ್ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಪಾಲಿಸಲಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com