ನೀರವ್ ಮೋದಿ ನ್ಯಾಯಾಂಗ ಬಂಧನ ಜ.30ರ ವರೆಗೆ ವಿಸ್ತರಿಸಿದ ಯುಕೆ ಕೋರ್ಟ್

ಭಾರತಕ್ಕೆ ಬೇಕಾಗಿರುವ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿಯನ್ನು ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜನವರಿ 30ರ ವರೆಗೆ ವಿಸ್ತರಿಸಿದೆ.
ನೀರವ್ ಮೋದಿ
ನೀರವ್ ಮೋದಿ

ಲಂಡನ್: ಭಾರತಕ್ಕೆ ಬೇಕಾಗಿರುವ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿಯನ್ನು ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜನವರಿ 30ರ ವರೆಗೆ ವಿಸ್ತರಿಸಿದೆ.

ಪ್ರಸ್ತುತ ಜೈಲಿನಲ್ಲಿರುವ 48 ವರ್ಷದ ನೀರವ್ ಮೋದಿಯ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಯ ನಡೆಸಿದ ನ್ಯಾಯಾಧೀಶ ಡೇವಿಡ್ ರೊಬಿನ್ಸನ್ ಅವರು, ನ್ಯಾಯಾಂಗ ಬಂಧನ ಅವಧಿಯನ್ನು ಜನವರಿ 30ರ ವರೆಗೆ ವಿಸ್ತರಿಸಿ, ಅಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಈ ವರ್ಷ ಮೇ 11ರಿಂದ 15ರ ವರೆಗೆ ವಿಚಾರಣೆ ನಡೆಯಲಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com