ಎನ್ಆರ್ ಸಿ ಎಫೆಕ್ಟ್: 2 ತಿಂಗಳಲ್ಲಿ 445 ಬಾಂಗ್ಲಾದೇಶಿಯರು ಸ್ವದೇಶಕ್ಕೆ ವಾಪಸ್!

ಭಾರತದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ಪರಿಣಾಮ ಕಳೆದ 2 ತಿಂಗಳಲ್ಲಿ ಭಾರತದಿಂದ ಸುಮಾರು 445 ಬಾಂಗ್ಲಾದೇಶೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ಪರಿಣಾಮ ಕಳೆದ 2 ತಿಂಗಳಲ್ಲಿ ಭಾರತದಿಂದ ಸುಮಾರು 445 ಬಾಂಗ್ಲಾದೇಶೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ ನಿರ್ದೇಶಕ ಜನರಲ್ ಮೊಹಮದ್ ಶಫೀನುಲ್ ಇಸ್ಲಾಮ್ ಅವರು ಮಾಹಿತಿ ನೀಡಿದ್ದು, ಕಳೆದ 2 ತಿಂಗಳಲ್ಲಿ ಭಾರತದಿಂದ 445 ಬಾಂಗ್ಲಾದೇಶೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಅಂತೆಯೇ 2019ರಲ್ಲಿ ಭಾರತದಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ನುಸುಳಿದ ಆರೋಪದ ಮೇರೆಗೆ ಸುಮಾರು 1000 ಮಂದಿ ನಿರಾಶ್ರಿತರನ್ನು ಬಂಧಿಸಲಾಗಿದೆ. 445 ಮಂದಿ ಬಾಂಗ್ಲಾದೇಶೀಯರ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಅವರೆಲ್ಲರೂ ಬಾಂಗ್ಲಾದೇಶಿಯರೇ ಆಗಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಭಾರತದ ಪೌರತ್ವ ನೋಂದಣಿ ಕುರಿತು ಮಾತನಾಡಿದ ಅವರು, ಎನ್ ಆರ್ ಸಿ ಭಾರತದ ಆಂತರಿಕ ವಿಚಾರ. ನೆರೆಯ ರಾಷ್ಟ್ರಗಳ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಭಾರತ ಕಾನೂನು ರಚನೆ ಮಾಡಲಿದೆ ಎಂಬ ವಿಶ್ವಾಸವಿದೆ. ಆದರೆ ಗಡಿಯಲ್ಲಿ ಉಭಯ ದೇಶದಗಳ ಸೈನಿಕರ ನಡುವೆ ಪರಸ್ಪರ ಸಹಕಾರ ಮುಖ್ಯ. ಅಂತೆಯೇ ಗಡಿಯಲ್ಲಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ತನ್ನ ಕಾರ್ಯ ಮುಂದುವರೆಸಲಿದ್ದು, ಗಡಿಯಾಚೆಗಿನ ಸ್ಮಗ್ಲಿಂಗ್ ಮತ್ತು ಇತರೆ ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಡಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com