ಅಮೆರಿಕ ದಾಳಿಯ ನಂತರ ಬಾಗ್ದಾದ್‌ನ ಹಸಿರು ವಲಯ ಸುತ್ತುವರಿದ ಇರಾಕ್‌ ಪಡೆ

ಅಮೆರಿಕ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಸಾವನ್ನಪ್ಪಿದ ಬೆನ್ನಲ್ಲೇ ಇತ್ತ ಬಾಗ್ದಾದ್‌ನ ಹಸಿರು ವಲಯವನ್ನು ಇರಾಕ್‌ ಪಡೆಗಳು ಸುತ್ತುವರೆದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗ್ದಾದ್: ಅಮೆರಿಕ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಸಾವನ್ನಪ್ಪಿದ ಬೆನ್ನಲ್ಲೇ ಇತ್ತ ಬಾಗ್ದಾದ್‌ನ ಹಸಿರು ವಲಯವನ್ನು ಇರಾಕ್‌ ಪಡೆಗಳು ಸುತ್ತುವರೆದಿವೆ.

ಅಮೆರಿಕದ ಪಡೆಯ ವೈಮಾನಿಕ ದಾಳಿಯಿಂದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ "ಕುದ್ಸ್ ಫೋರ್ಸ್‌'ನ ಕಮಾಂಡರ್, ಮೇಜರ್ ಜನರಲ್ ಕಾಸಿಮ್ ಸುಲೈಮಾನಿ ಮತ್ತು ಇರಾಕಿ ಶಿಯಾ ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ ನಂತರ ಇರಾಕ್ ಭದ್ರತಾ ಪಡೆಗಳು ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಇರುವ ಹಸಿರು ವಲಯವನ್ನು ಸುತ್ತುವರೆದಿವೆ ಎಂದು ಸ್ಕೈ ನ್ಯೂಸ್‌ ಅರಬಿಯಾ ವರದಿ ಮಾಡಿದೆ.

ಇಂದು ಬೆಳಗ್ಗಿನ ಜಾವ, ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಸುಲೈಮಾನಿ ಮತ್ತು ಇರಾಕ್‌ನ ಶಿಯಾ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್‌ನ ಇಬ್ಬರು ಹಿರಿಯ ಸದಸ್ಯರಾದ ಉಪ ಮುಖ್ಯಸ್ಥ ಅಬು ಮಹ್ದಿ ಅಲ್-ಮುಹಂದಿಸ್ ಮತ್ತು ಶಿಷ್ಟಾಚಾರ ವಿಭಾಗದ ಮುಖ್ಯಸ್ಥ ಮುಹಮ್ಮದ್ ಜಾಬ್ರಿ ಸೇರಿ ಏಳು ಜನರು ಸಾವನ್ನಪ್ಪಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ಈ ದಾಳಿ ನಡೆಸಲಾಗಿದೆ ಮತ್ತು "ಭವಿಷ್ಯದ ಇರಾನಿನ ದಾಳಿ ಯೋಜನೆಗಳನ್ನು ತಡೆಯುವ" ಗುರಿಯನ್ನು ಹೊಂದಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಹೇಳಿದೆ.

ಈ ನಡುವೆ ಸುದ್ದಿ ಸಂಸ್ಥೆ ಎಫೇ ಪೆಂಟಗನ್ ನೀಡಿರುವ ಹೇಳಿಕೆಯನ್ನು ಪ್ರಕಟಿಸಿದ್ದು, "ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇಲೆ ವಿದೇಶದಲ್ಲಿ ನಿಯೋಜನೆಗೊಂಡಿರುವ ಅಮೇರಿಕದ ಸೈನಿಕರ ರಕ್ಷಣೆಗಾಗಿ ಕಾಸೀಮ್ ಸುಲೇಮಾನಿ ಅವರ ಹತ್ಯೆಗೆ ಹೆಜ್ಜೆ ಇಡಲಾಗಿದೆ. ಭವಿಷ್ಯದಲ್ಲಿ ಇರಾನ್ ಯೋಜಿಸಿರುವ ಹಲ್ಲೆಗಳನ್ನು ತಡೆಯಲು ಇಲ್ಲಿ ವಾಯುದಾಳಿ ನಡೆಸಲಾಗಿದ್ದು, ಅಮೇರಿಕ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ತನ್ನ ನಾಗರಿಕರ ರಕ್ಷಣೆಗೆ ಆವಶ್ಯಕ ಕ್ರಮ ಕೈಗೊಳ್ಳಲಿದೆ" ಎಂದು ಪೆಂಟಗನ್ ತನ್ನ ಹೇಳಿಕೆಯಲ್ಲಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com