ಬಾಂಗ್ಲಾ ವಿಡಿಯೋ ತೋರಿಸಿ ಉತ್ತರ ಪ್ರದೇಶದ್ದು ಎಂದ ಪಾಕ್ ಪ್ರಧಾನಿ, ಭೀಕರ ಟ್ರೋಲ್!

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನೆಟ್ಟಿಗರು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಇಮ್ರಾನ್ ಖಾನ್ ಟ್ವೀಟ್
ಇಮ್ರಾನ್ ಖಾನ್ ಟ್ವೀಟ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನೆಟ್ಟಿಗರು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಹೌದು.. ಭಾರತದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸುವ ಬರದಲ್ಲಿ ನಕಲಿ ವಿಡಿಯೋ ಒಂದನ್ನು ಹಾಕಿ ಭಾರತದ ಟೀಕೆ ಮಾಡಲು ಹೋದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರನ್ನು ಟ್ವಿಟರ್ ನಲ್ಲಿ ಭೀಕರವಾಗಿ ಟ್ರೋಲ್ ಮಾಡಲಾಗುತ್ತಿದೆ. ಸಿಎಎ ಕಾಯ್ದೆ ಕುರಿತಂತೆ ಈ ಹಿಂದೆ ಟೀಕೆ ಮಾಡಿದ್ದ ಇಮ್ರಾನ್ ಖಾನ್, 'ಮುಸ್ಲಿಮರ ಮೇಲೆ ಭಾರತದ ಪೊಲೀಸರು ದೌರ್ಜನ್ಯ ನೋಡಿ ಎಂದು ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವ ವಿಡಿಯೋವನ್ನು ಶುಕ್ರವಾರ ಅಪ್ಲೋಡ್ ಮಾಡಿದ್ದರು. ಆ ಮೂಲಕ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಲು ಯತ್ನಿಸಿದ್ದರು.

ಇದೇ ವಿಚಾರವಾಗಿ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರೂ ಕೂಡ ಟ್ವೀಟ್ ಮಾಡಿದ್ದು, ಪಾಕಿಸ್ತಾನದ ಕಳ್ಳ ಸುದ್ದಿ ಮತ್ತೆ ಸಿಕ್ಕಿಬಿದಿದ್ದು, ಕೂಡಲೇ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಟ್ವೀಟ್ ಮಾಡಿರುವ ವಿಡಿಯೋ ಭಾರತದ್ದು ಅಲ್ಲ. 2013ರ ಮೇ ತಿಂಗಳಿನಲ್ಲಿ ಬಾಂಗ್ಲಾದೇಶದ ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ (ಇದು ಅವರ ಸಮವಸ್ತ್ರದ ಮೇಲೆ ಬರೆದಿದೆ) ನಡೆಸಿದ್ದ ಕಾರ್ಯಾಚರಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಅಸಲಿಗೆ ವಿಡಿಯೋದಲ್ಲಿ ನಡೆದ ಘಟನೆ ಭಾರತದಲ್ಲಿ ಸಂಭವಿಸಿದ್ದು ಅಲ್ಲವೇ ಅಲ್ಲ. ಕಳೆದ ವರ್ಷ ಬಾಂಗ್ಲಾದೇಶದಲ್ಲಿ (ಆರ್ ಎಬಿ- ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್) ಪೊಲೀಸರು ಅಲ್ಲಿನ ಉಗ್ರಗಾಮಿ ಸಂಘಟನೆ ಸದಸ್ಯ ತಪ್ಪಿಸಿಕೊಂಡು ಹೋಗುತ್ತಿರುವಾಗ ಥಳಿಸಿದ್ದ ಘಟನೆ. ಈ ವಿಚಾರ ತಿಳಿಯದೇ ಇಮ್ರಾನ್ ಖಾನ್ ವಿಡಿಯೋ ಅಪ್ಲೋಡ್ ಮಾಡಿದ್ದರು.  ಆದರೆ ಈ ವಿಚಾರವನ್ನು ಪತ್ತೆ ಮಾಡಿದ ನೆಟ್ಟಿಗರು ಇಮ್ರಾನ್ ಖಾನ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 

ಪಾಕಿಸ್ತಾನದ ಪ್ರಧಾನಿಗೆ ಆರ್ ಎಬಿ- ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ ಪರಿಚಯ ಕೂಡ ಇಲ್ಲದೇ ಇರುವುದು ಅಚ್ಚರಿ ಎಂದು ನೆಟ್ಟಿಗರು ಪಾಕ್ ಪ್ರಧಾನಿಯ ಕಾಲೆಳೆಯುತ್ತಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಇಮ್ರಾನ್ ಖಾನ್ ಖಾತೆಯಿಂದ ಆ ಟ್ವೀಟ್ ಡಿಲೀಟ್ ಮಾಡಲಾಗಿದೆ. ಆದರೂ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ನೆಟ್ಟಿಗರು ಅದರ ಮೂಲಕ ಇಮ್ರಾನ್ ಖಾನ್ ಕಾಲೆಳೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com