ಭಾರತ, ಲಂಡನ್ ಗಳಲ್ಲಿ ನಡೆದ ಉಗ್ರರ ದಾಳಿ ಹಿಂದೆ ಇರಾನ್ ನ ಸೊಲೈಮಾನಿ ಕೈವಾಡವಿತ್ತು: ಡೊನಾಲ್ಡ್ ಟ್ರಂಪ್ 

ಅಮೆರಿಕ ವೈಮಾನಿಕ ದಾಳಿಯಲ್ಲಿ ಹತನಾದ ಇರಾನ್ ಭದ್ರತಾ ಪಡೆಯ ನಾಯಕ ಖಾಸಿಮ್ ಸೊಲೈಮಾನಿ ಭಾರತ ಮತ್ತು ಲಂಡನ್ ನಲ್ಲಿ ಭಯೋತ್ಪಾದಕ ದಾಳಿಯ ಸೂತ್ರಧಾರಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಆರೋಪ ಮಾಡಿದ್ದಾರೆ. 
ಕಸ್ಸೆಮ್ ಸೊಲೈಮಾನಿ
ಕಸ್ಸೆಮ್ ಸೊಲೈಮಾನಿ

ಲಾಸ್ ಏಂಜಲೀಸ್: ಅಮೆರಿಕ ವೈಮಾನಿಕ ದಾಳಿಯಲ್ಲಿ ಹತನಾದ ಇರಾನ್ ಭದ್ರತಾ ಪಡೆಯ ನಾಯಕ ಖಾಸಿಮ್ ಸೊಲೈಮಾನಿ ಭಾರತ ಮತ್ತು ಲಂಡನ್ ನಲ್ಲಿ ಭಯೋತ್ಪಾದಕ ದಾಳಿಯ ಸೂತ್ರಧಾರಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಆರೋಪ ಮಾಡಿದ್ದಾರೆ. 


ಶುಕ್ರವಾರ ಫ್ಲೋರಿಡಾದ ಪಾಮ್ ಬೀಚ್ ನ ರೆಸಾರ್ಟ್ ನಲ್ಲಿ ಸುದ್ದಿಗಾರರರ ಜೊತೆ  ಮಾತನಾಡಿದ ಟ್ರಂಪ್, ಸೊಲೈಮಾನಿಯ ಭಯೋತ್ಪಾದನೆಯ ಯುಗ, ಅಟ್ಟಹಾಸ ಕೊನೆಯಾಗಿದೆ, ಆತ ಮುಗ್ಧ ನಾಗರಿಕರನ್ನು ತನ್ನ ದಾಳಕ್ಕೆ ಬಳಸಿಕೊಳ್ಳುತ್ತಿದ್ದ, ದೆಹಲಿ ಮತ್ತು ಇಂಗ್ಲೆಂಡ್ ಗಳಲ್ಲಿ ಭಯೋತ್ಪಾದಕ ದಾಳಿಗೆ ಸಹ ಅವನೇ ಸೂತ್ರಧಾರಿಯಾಗಿದ್ದ. ಸೊಲೈಮಾನಿಯ ಅಸ್ವಸ್ಥ ಮನಸ್ಥಿತಿಯಿಂದಾಗಿ ಭಾರತ ಮತ್ತು ಲಂಡನ್ ನಲ್ಲಿ ಉಗ್ರ ದಾಳಿಗೆ ಕುಮ್ಮಕ್ಕು ನೀಡುವ ಮೂಲಕ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುವಂತಾಗಿತ್ತು ಎಂದು ಹೇಳಿದ್ದಾರೆ. 


 ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸೊಲೆಮನಿಯನ್ನು ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಲು ಆದೇಶ ನೀಡಿದ್ದಾಗಿಯೂ ಅವರು ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.


ಭಾರತದಲ್ಲಿ ಯಾವ ದಾಳಿಯನ್ನು ಸೊಲೈಮಾನ್ ಸಂಚು ರೂಪಿಸಿದ್ದ ಎಂದು ನಿಖರವಾಗಿ ಟ್ರಂಪ್ ಅವರು ಹೇಳದಿದ್ದರೂ ಅವರು 2012ರ ಫೆಬ್ರವರಿ 13ರಂದು ಇಸ್ರೇಲ್ ನ ರಾಯಭಾರಿ ಕಾರು ಭಾರತಕ್ಕೆ ಆಗಮಿಸುತ್ತಿದ್ದ ವೇಳೆ ಬಾಂಬ್ ಸ್ಫೋಟಿಸಿದ ಘಟನೆಯನ್ನು ಉಲ್ಲೇಖಿಸಿರಬಹುದು ಎಂದು ವ್ಯಾಖ್ಯಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಇಸ್ರೇಲ್ ರಾಯಭಾರಿ ತಾಲ್ ಯೆಹೊಶುವಾ ಕೊರೆನ್ ಗಾಯಗೊಂಡು ನಂತರ ಸರ್ಜರಿಗೆ ಒಳಗಾಗಿದ್ದರು. 


ಈ ಘಟನೆ ಬಳಿಕ ಇಸ್ರೇಲ್ ಪ್ರಧಾನಿ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಆರೋಪಿಸಿದ್ದರು.


ಇರಾಕ್ ನಲ್ಲಿರುವ ಅಮೆರಿಕಾದ ರಾಯಭಾರಿ ನಿಯೋಗಗಳ ಮೇಲಿನ ದಾಳಿ, ರಾಕೆಟ್ ದಾಳಿಯ ಹಿಂದೆ ಸೊಲೈಮನ್ ಕೈವಾಡವಿತ್ತು ಎಂದು ಸಹ ಟ್ರಂಪ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com