ಪಾಕಿಸ್ತಾನ ಸೈನಿಕರಿಗೆ ಮಿಲಿಟರಿ ತರಬೇತಿ ನೀಡಲು ಅಮೆರಿಕಾ ಸರ್ಕಾರ ಒಪ್ಪಿಗೆ 

ಪಾಕಿಸ್ತಾನದ ಭದ್ರತಾ ಸಿಬ್ಬಂದಿಗೆ ಅಮೆರಿಕಾದ ಸಂಸ್ಥೆಗಳಲ್ಲಿ ಮಿಲಿಟರಿ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅಮೆರಿಕಾ ಸರ್ಕಾರ ಅನುಮೋದನೆ ನೀಡಿದೆ ಎಂದು ಅಮೆರಿಕಾದ ಉನ್ನತ ನಿಯೋಗ ತಿಳಿಸಿದೆ.
ಪಾಕಿಸ್ತಾನ ಸೈನಿಕರಿಗೆ ಮಿಲಿಟರಿ ತರಬೇತಿ ನೀಡಲು ಅಮೆರಿಕಾ ಸರ್ಕಾರ ಒಪ್ಪಿಗೆ 

ವಾಷಿಂಗ್ಟನ್: ಪಾಕಿಸ್ತಾನದ ಭದ್ರತಾ ಸಿಬ್ಬಂದಿಗೆ ಅಮೆರಿಕಾದ ಸಂಸ್ಥೆಗಳಲ್ಲಿ ಮಿಲಿಟರಿ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅಮೆರಿಕಾ ಸರ್ಕಾರ ಅನುಮೋದನೆ ನೀಡಿದೆ ಎಂದು ಅಮೆರಿಕಾದ ಉನ್ನತ ನಿಯೋಗ ತಿಳಿಸಿದೆ.


ಆದರೆ ಪಾಕಿಸ್ತಾನಕ್ಕೆ ಒಟ್ಟಾರೆ ಭದ್ರತಾ ನೆರವು ರದ್ದುಪಡಿಸುವ ನಿರ್ಧಾರ ಮುಂದುವರಿಯಲಿದೆ ಎಂದು ನಿಯೋಗ ತಿಳಿಸಿದೆ.


ಅಮೆರಿಕಾ ಕಾರ್ಯದರ್ಶಿ ಮೈಕ್ ಪೊಂಪಿಯೊ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೆದ್ ಬಾಜ್ವಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಇರಾನ್ ನ ಸೇನಾಧಿಕಾರಿ ಖ್ವಾಸೆಮ್ ಸೊಲೈಮಾನಿ ಅವರ ಹತ್ಯೆಯ ಬಳಿಕ ಅಲ್ಲಿನ ಸ್ಥಿತಿಗತಿ ಬಗ್ಗೆ ಚರ್ಚಿಸಿದ ನಂತರ ಪಾಕಿಸ್ತಾನಕ್ಕೆ ಐಎಂಇಟಿ ಅಧ್ಯಕ್ಷ ಅಲಿಸ್ ಜಿ ವೆಲ್ಸ್ ಟ್ವೀಟ್ ಮಾಡಿದ್ದಾರೆ.


ಈ ತರಬೇತಿ ಮೂಲಕ ಎರಡೂ ದೇಶಗಳ ಮಿಲಿಟರಿ ಸಹಕಾರ ಬಲವರ್ಧನೆಯಾಗಲಿದೆ. ಕಳೆದ 2018ರ ಆಗಸ್ಟ್ ತಿಂಗಳಲ್ಲಿ ಅಮೆರಿಕಾದ ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ನೀಡಿದ್ದ ದಶಕಗಳಿಗೂ ಹೆಚ್ಚಿನ ಸಮಯದ ಅಂತಾರಾಷ್ಟ್ರೀಯ ಮಿಲಿಟರಿ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮವನ್ನು ರದ್ದುಪಡಿಸಿತ್ತು. ರಷ್ಯಾದ ರಕ್ಷಣಾ ಕೇಂದ್ರಗಳಲ್ಲಿ ಪಾಕಿಸ್ತಾನ ಪಡೆ ತರಬೇತಿ ಪಡೆಯಬಹುದು ಎಂದು ಪಾಕಿಸ್ತಾನ ಮತ್ತು ರಷ್ಯಾ ಸಹಿ ಮಾಡಿದ ನಂತರ ಅಮೆರಿಕಾ ರದ್ದುಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com