ಮುಯ್ಯಿಗೆ ಮುಯ್ಯಿ: ಇರಾಕ್ ನ ಅಮೆರಿಕ ಮಿಲಿಟರಿ ಪಡೆ ಮೇಲೆ ದಾಳಿಯ ಬೆದರಿಕೆ ಹಾಕಿದ ಶಿಯಾ ಸೇನಾಪಡೆ 

ಮುಯ್ಯಿಗೆ ಮುಯ್ಯಿ: ಇರಾಕ್ ನ ಅಮೆರಿಕ ಮಿಲಿಟರಿ ಪಡೆ ಮೇಲೆ ದಾಳಿಯ ಬೆದರಿಕೆ ಹಾಕಿದ ಶಿಯಾ ಸೇನಾಪಡೆ 

ಇರಾಕ್ ನಲ್ಲಿ ಅಮೆರಿಕಾದ ಸೇನಾಪಡೆ ಬಳಸುತ್ತಿರುವ ಮಿಲಿಟರಿ ನೆಲೆಗಳ ಮೇಲೆ ಭಾನುವಾರ ಸಂಜೆ ದಾಳಿ ನಡೆಸುವುದಾಗಿ ಇರಾನ್ ಬೆಂಬಲಿತ ಜನಪ್ರಿಯ ಪಡೆ ಇರಾಕ್ ನ ಶಿಯಾ ಸೇನಾಪಡೆ ಕಟೈಬ್ ಹೆಜ್ಬೊಲ್ಲಾ ಬೆದರಿಕೆ ಹಾಕಿದೆ.

ಬಾಗ್ದಾದ್: ಇರಾಕ್ ನಲ್ಲಿ ಅಮೆರಿಕಾದ ಸೇನಾಪಡೆ ಬಳಸುತ್ತಿರುವ ಮಿಲಿಟರಿ ನೆಲೆಗಳ ಮೇಲೆ ಭಾನುವಾರ ಸಂಜೆ ದಾಳಿ ನಡೆಸುವುದಾಗಿ ಇರಾನ್ ಬೆಂಬಲಿತ ಜನಪ್ರಿಯ ಪಡೆ ಇರಾಕ್ ನ ಶಿಯಾ ಸೇನಾಪಡೆ ಕಟೈಬ್ ಹೆಜ್ಬೊಲ್ಲಾ ಬೆದರಿಕೆ ಹಾಕಿದೆ.


ಇಂದು ಸಂಜೆ ಆರಂಭವಾಗುವ ದಾಳಿಯಲ್ಲಿ ಶತ್ರುರಾಷ್ಟ್ರ ಅಮೆರಿಕಾದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಿದ್ದು ಇರಾಕ್ ನ ಭದ್ರತಾ ಪಡೆಗಳ ನೌಕರರು ಒಂದು ಕಿಲೋ ಮೀಟರ್ ದೂರಕ್ಕೆ ಹೋಗಿ ನಿಲ್ಲಬೇಕು ಎಂದು ಇರಾಕ್ ನ ಶಿಯಾ ಸೇನಾಪಡೆ ಹೇಳಿಕೆಯಲ್ಲಿ ತಿಳಿಸಿದೆ.


ನಿನ್ನೆ ಇರಾಕ್ ನ ರಾಜಧಾನಿ ಬಾಗ್ದಾದ್ ನಲ್ಲಿ ಸಾಕಷ್ಟು ಕಡೆ ರಾಕೆಟ್ ದಾಳಿ ನಡೆದಿದ್ದು ಅಲ್ ಜದ್ರಿಯಾ ಮತ್ತು ಬಾಲದ್ ಮಿಲಿಟರಿ ನೆಲೆಗಳ ವಸತಿ ಪ್ರದೇಶಗಳಲ್ಲಿ ಸಾಕಷ್ಟು ದಾಳಿ ನಡೆದಿವೆ. ಉತ್ತರ ಬಾಗ್ದಾದ್ ನ 50 ಮೈಲಿಗಳ ವ್ಯಾಪ್ತಿಯಲ್ಲಿ ಅಮೆರಿಕಾ ಸೇನಾಪಡೆಗಳ ವಸತಿಗೃಹಗಳು ಇಲ್ಲಿವೆ.


ಕಳೆದ ಶುಕ್ರವಾರ ಇರಾನ್ ನ ಕ್ರಾಂತಿಕಾರಿ ರಕ್ಷಣಾ ಪಡೆ ನಾಯಕ ಖಾಸಿಮ್ ಸೊಲೈಮನಿಯನ್ನು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಮೆರಿಕಾ ಡ್ರೋನ್ ದಾಳಿ ನಡೆಸಿ ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಇರಾಕ್-ಇರಾನ್ ಈ ಕ್ರಮಕ್ಕೆ ಮುಂದಾಗಿದೆ.


ಟೆಹ್ರಾನ್ ಅಮೆರಿಕಾಕ್ಕೆ ತಕ್ಕ ಶಾಸ್ತಿ ನೀಡಲಿದೆ ಎಂದು ಇರಾನ್ ಅಧ್ಯಕ್ಷ ಹಸ್ಸನ್ ರೌಹಾನಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com