ಅಮೆರಿಕಾ ವಿರುದ್ಧ ಸಮರ ಶುರು: ಇರಾನ್ ಹ್ಯಾಕರ್ ಗಳಿಂದ ಅಮೆರಿಕಾ ವೆಬ್'ಸೈಟ್ ಹ್ಯಾಕ್

ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರನ್ನು ಹತ್ಯೆ ಮಾಡಿದ ಅಮೆರಿಕಾ ವಿರುದ್ಧ ಸೈಬರ್ ಸಮರ ಸೇರಿ ವಿವಿಧ ರೀತಿಯ ದಾಳಿಗಳನ್ನು ಇರಾನ್ ನಡೆಸಬಹುದು ಎಂಬ ಊಹೆ ಇದೀಗ ನಿಜವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದ ವೆಬ್ ಸೈಟ್ ವೊಂದನ್ನು ಇರಾನ್ ಹ್ಯಾಕ್ ಮಾಡಿರುವ ಘಟನೆ ವರದಿಯಾಗಿದೆ. 
ಅಮೆರಿಕಾ ವಿರುದ್ಧ ಸಮರ ಶುರು: ಇರಾನ್ ಹ್ಯಾಕರ್ ಗಳಿಂದ ಅಮೆರಿಕಾ ವೆಬ್'ಸೈಟ್ ಹ್ಯಾಕ್
ಅಮೆರಿಕಾ ವಿರುದ್ಧ ಸಮರ ಶುರು: ಇರಾನ್ ಹ್ಯಾಕರ್ ಗಳಿಂದ ಅಮೆರಿಕಾ ವೆಬ್'ಸೈಟ್ ಹ್ಯಾಕ್

ವಾಷಿಂಗ್ಟನ್: ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರನ್ನು ಹತ್ಯೆ ಮಾಡಿದ ಅಮೆರಿಕಾ ವಿರುದ್ಧ ಸೈಬರ್ ಸಮರ ಸೇರಿ ವಿವಿಧ ರೀತಿಯ ದಾಳಿಗಳನ್ನು ಇರಾನ್ ನಡೆಸಬಹುದು ಎಂಬ ಊಹೆ ಇದೀಗ ನಿಜವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದ ವೆಬ್ ಸೈಟ್ ವೊಂದನ್ನು ಇರಾನ್ ಹ್ಯಾಕ್ ಮಾಡಿರುವ ಘಟನೆ ವರದಿಯಾಗಿದೆ. 

ಫೆಡರಲ್ ಡಿಪಾಸಿಟರಿ ಲೈಬ್ರರಿ ಪ್ರೋಗ್ರಾಮ್ ಎಂಬ ವೆಬ್ ಸೈಟ್ ಅನ್ನು ಶನಿವಾರ ಹ್ಯಾಕ್ ಮಾಡಲಾಗಿದೆ. ದೇವರ ಹೆಸರಿನಲ್ಲಿ ಇರಾನ್ ಸೈಬರ್ ಸೆಕ್ಯುರಿಟಿ ಗ್ರೂಪ್ ಹ್ಯಾಕರ್ ಸಂಸ್ಥೆ ಈ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದೆ. ಇದು ಇರಾನ್ ಸೈಬರ್ ಸಾಮರ್ಥ್ಯದ ಸಣ್ಣ ಭಾಗ. ನಾವು ಯಾವತ್ತಿಗೂ ಸಿದ್ಧವಾಗಿದ್ದೇವೆಂಬ ಸಾಲಗಳುನ್ನು ಬರೆಯಲಾಗಿದೆ. 

ಸಾರ್ವಜನಿಕರಿಗೆ ಉಚಿತವಾಗಿ ಸರ್ಕಾರಿ ಪ್ರಕಾಶನಗಳನ್ನು ಒದಗಿಸುವ ಉದ್ದೇಶದಿಂದ ಎಫ್'ಡಿಎಪ್ ಪಿಯನ್ನು ಸೃಷ್ಟಿಸಲಾಗಿದೆ. ಈ ವೆಬ್ ಸೈಟ್ ನ್ನು ಹ್ಯಾಕ್ ಮಾಡುವ ಮೂಲಕ ಇರಾನ್ ಸೈಬರ್ ದಾಳಿ ಆರಂಭಿಸಿರಬಹುದು ಎಂದು ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com