'1917', 'ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್' ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

ಸ್ಯಾಮ್ ಮೆಂಡೆಸ್ ಅವರ ತಾಂತ್ರಿಕತೆಯ ಬೆರಗೌಗೊಳಿಸುವ ಮೊದಲ ವಿಶ್ವ ಸಮರದ ಕಥೆ “1917”ಗೆ ಅತ್ಯುತ್ತಮ ಚಿತ್ರ ಗೋಲ್ಡನ್ ಗ್ಲೋಬ್ಸ್ಪ್ರಶಸ್ತಿ ಲಭಿಸಿದೆ. 77ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಬ ಭಾನುವಾರ ನೆರವೇರಿದ್ದು ಕ್ವೆಂಟಿನ್ ಟ್ಯಾರಂಟಿನೊ ಅವರ “ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್‌" ಹಾಸ್ಯ, ಸಂಗೀತದ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ
ಅತ್ಯುತ್ತಮ ನಟ ಪ್ರಶಸ್ತಿ ವಿಜೇತರಾದ ಜೋಕ್ವಿನ್ ಫೀನಿಕ್ಸ್
ಅತ್ಯುತ್ತಮ ನಟ ಪ್ರಶಸ್ತಿ ವಿಜೇತರಾದ ಜೋಕ್ವಿನ್ ಫೀನಿಕ್ಸ್

ಸ್ಯಾಮ್ ಮೆಂಡೆಸ್ ಅವರ ತಾಂತ್ರಿಕತೆಯ ಬೆರಗೌಗೊಳಿಸುವ ಮೊದಲ ವಿಶ್ವ ಸಮರದ ಕಥೆ “1917”ಗೆ ಅತ್ಯುತ್ತಮ ಚಿತ್ರ ಗೋಲ್ಡನ್ ಗ್ಲೋಬ್ಸ್ಪ್ರಶಸ್ತಿ ಲಭಿಸಿದೆ. 77ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಬ ಭಾನುವಾರ ನೆರವೇರಿದ್ದು ಕ್ವೆಂಟಿನ್ ಟ್ಯಾರಂಟಿನೊ ಅವರ “ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್‌" ಹಾಸ್ಯ, ಸಂಗೀತದ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

"1917" ಪ್ರಶಸ್ತಿ ಗಳಿಸಿರುವುದು ಅಚ್ಚರಿದಾಯಕ ಅಂಶವಾಗಿದ್ದು ದಿ ಐರಿಶ್ ಮನ್, ಜೋಕರ್, ಮ್ಯಾರೇಜ್ ಸ್ಟೋರಿ ಮತ್ತು ದಿ ಟೂ ಪಾಪ್ಸ್ ಚಿತ್ರಗಳನ್ನು ಹಿಂದಿಕ್ಕಿ ಮೆಂಡಿಸ್ ಚಿತ್ರ ಈ ಸಾಧನೆ ಮಾಡಿದೆ.ಇಷ್ಟೇ ಅಲ್ಲದೆ "1917" ತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದೆ. ನಿರ್ದೇಶಕ ಸ್ಯಾಮ್ ಮೆಂಡಿಸ್ ಈ ಅದ್ಭುತ ಪ್ರಶಸ್ತಿ ಲಭಿಸಿದ್ದಕ್ಕೆ ಹರ್ಷಚಿತ್ತರಾಗಿದ್ದಾರೆ.

ಲಾಸ್ ಎಂಜಲೀಸ್ ನ ಬೆವರ್ಲಿ ಹಿಲ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನೆರವೇರಿದೆ. 

'ಜೋಕರ್' ಚಿತ್ರಕ್ಕಾಗಿ ಜೊವಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟಪ್ರಶಸ್ತಿ ಗಳಿಸಿದ್ದರೆ ಆಕ್ವಾಫಿನಾ, ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ಬ್ರಾಡ್ ಪಿಟ್ಅತ್ಯುತ್ತಮ ಪೋಷಕ ನಟರಾಗಿ ಪ್ರಶಸ್ತಿ ಗಳಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com