ಅಮೆರಿಕದ ಪೆಂಟಗಾನ್ ಭಯೋತ್ಪಾದಕ ಸಂಘಟನೆ: ಇರಾನ್ ಸಂಸತ್ ಘೋಷಣೆ

ಇರಾನ್ ಸಂಸತ್ತು, ಅಮೆರಿಕಾ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುವ ತಿದ್ದುಪಡಿ ವಿಧೇಯಕವನ್ನು ಮಂಗಳವಾರ ಬಹುಮತದಿಂದ ಅಂಗೀಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೆಹ್ರಾನ್: ಇರಾನ್ ಸಂಸತ್, ಅಮೆರಿಕಾ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುವ ತಿದ್ದುಪಡಿ ವಿಧೇಯಕವನ್ನು ಮಂಗಳವಾರ ಬಹುಮತದಿಂದ ಅಂಗೀಕರಿಸಿದೆ.

ಇರಾನ್ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೆೈಮಾನಿ ಹತ್ಯೆ ಮಾಡಿದವರನ್ನು"ಭಯೋತ್ಪಾದಕರು" ಎಂದು ಸಂಸತ್ತು ಮಂಗಳವಾರ ಅನುಮೋದಿಸಿದೆ. ಅಮೆರಿಕಾ ಕೇಂದ್ರೀಯ ಕಮಾಂಡ್ ಅನ್ನು ಭಯೋತ್ಪಾದಕ ಸಂಘಟನೆ  ಎಂದು ಕರೆಯುವ ತಿದ್ದುಪಡಿ ವಿಧೇಯಕವನ್ನು ಸಂಸತ್ ಸದಸ್ಯರು ಅನುಮೋದಿಸಿದ್ದಾರೆ. 

ಕುರ್ದಿಶ್ ಪಡೆಯ ಕಮಾಂಡರ್ ಜನರಲ್ ಖಾಸಿಂ ಸುಲೆಮಾನಿ  ಹತ್ಯೆ ನಡೆಸಿದ ಎಲ್ಲಾ ಕಮಾಂಡರ್ ಗಳು ಹಾಗೂ ಅಮೆರಿಕಾ ಸಿಬ್ಬಂದಿಯನ್ನು ಭಯೋತ್ಪಾದಕರು ಎಂದು ಇರಾನ್  ಸಂಸತ್ ಘೋಷಿಸಿದೆ. ಅಂತೆಯೇ ಸಂಸತ್ತಿನ ಸ್ಪೀಕರ್ ಅಲಿಲಾರಿಜಾನಿ,  ಕುರ್ದಿಶ್ ಪಡೆಯ ಶಾಖೆಗಾಗಿ ಪ್ರಸಕ್ತ ಇರಾನಿಯನ್ ವರ್ಷದಲ್ಲಿ ರಾಷ್ಟ್ರೀಯ ಅಭಿವೃದ್ದಿ ನಿಧಿಯಿಂದ 200 ಮಿಲಿಯನ್ ಯುರೋ ಗಳನ್ನು ಪಾವತಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಭಯೋತ್ಪಾದನೆ ವಿಧೇಯಕದ ವ್ಯಾಪ್ತಿಯನ್ನು ವಿಸ್ತರಿಸಿ ಅಮೆರಿಕಾದ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗ ಸಂಸ್ಥೆಗಳನ್ನು ಇದರ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ- ಇರ್ನಾ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com