ತಪಿತಸ್ಥರನ್ನು ಶಿಕ್ಷಿಸಿ, ಪರಿಹಾರ ನೀಡಿ ಕ್ಷಮೆ ಕೇಳಿ: ವಿಮಾನ ಹೊಡೆದುರುಳಿಸಿದ ಇರಾನ್ ಗೆ ಉಕ್ರೆನ್ ಒತ್ತಾಯ

ತಮ್ಮ ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು, ಪರಿಹಾರ ನೀಡಿ ಕ್ಷಮೆ ಕೇಳಬೇಕೆಂದು  ಇರಾನ್ ದೇಶವನ್ನು ಉಕ್ರೆನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ ಸ್ಕೈ ಒತ್ತಾಯಿಸಿದ್ದಾರೆ.
ಪತನಗೊಂಡ ವಿಮಾನದಲ್ಲಿನ ಅವಶೇಷ ಸಂಗ್ರಹಿಸುತ್ತಿರುವ ಸಿಬ್ಬಂದಿ
ಪತನಗೊಂಡ ವಿಮಾನದಲ್ಲಿನ ಅವಶೇಷ ಸಂಗ್ರಹಿಸುತ್ತಿರುವ ಸಿಬ್ಬಂದಿ

ಕೀವ್: ತಮ್ಮ ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು, ಪರಿಹಾರ ನೀಡಿ ಕ್ಷಮೆ ಕೇಳಬೇಕೆಂದು  ಇರಾನ್ ದೇಶವನ್ನು ಉಕ್ರೆನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ ಸ್ಕೈ ಒತ್ತಾಯಿಸಿದ್ದಾರೆ.

ಇರಾನ್ ತಪ್ಪಿತಸ್ಥರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಶಿಕ್ಷೆ ಕೊಡಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಉಕ್ರೆನ್ ನಾಯಕರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.ಆಗಿರುವ ತಪ್ಪಿಗೆ ಪರಿಹಾರ ಕೂಡಾ ನೀಡಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಇರಾಕ್ ನಲ್ಲಿನ ಅಮೆರಿಕಾದ ವಾಯುಪಡೆಯನ್ನು ಗುರಿಯಾಗಿರಿಸಿಕೊಂಡು ಬುಧವಾರ  ನಡೆಸಿದ ಕ್ಷಿಪಣಿ ದಾಳಿಯಲ್ಲಿ ತಪ್ಪಾಗಿ ಗ್ರಹಿಸಿ ಉಕ್ರೆನ್ ವಿಮಾನವನ್ನು ಹೊಡೆದುರುಳಿಸಲಾಗಿದ್ದು,176 ಪ್ರಯಾಣಿಕರು ಹತ್ಯೆಯಾಗಿರುವುದನ್ನು ತೆಹ್ರಾನ್  ಒಪ್ಪಿಕೊಂಡಿತ್ತು.

ವಿಳಂಬ ಹಾಗೂ ಯಾವುದೇ ಅಡ್ಡಿಯಿಲ್ಲದೆ ಈ ಘಟನೆ ಸಂಬಂಧ ವಿಚಾರಣೆ ನಡೆಯಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಜೆಲೆನ್ ಸ್ಕೈ ತಿಳಿಸಿದ್ದಾರೆ.ಪೂರ್ಣ ಪ್ರಮಾಣದ ತನಿಖೆ ನಡೆಸಬೇಕು ಹಾಗೂ ಘಟನೆಗೆ ಕಾರಣರಾದ ಅಧಿಕಾರಿಗಳು ಕ್ಷಮೆಯಾಚಿಸಬೇಕು ಎಂದು ಅವರು ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ.

ತಪ್ಪಾಗಿ ಗ್ರಹಿಸಿ ಉಕ್ರೆನ್ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ತೀವ್ರ ವಿಷಾಧ ವ್ಯಕ್ತಪಡಿಸುವುದಾಗಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಇಂದು ತಿಳಿಸಿದ್ದರು. 

ವಿಮಾನದ ಕಪ್ಪು ಪೆಟ್ಟಿಗೆಗಳು, ಅವಶೇಷಗಳು , ವಿಮಾನ ಪತನದ ಸ್ಥಳ ಹಾಗೂ ಪೈಲಟ್ ಹಾಗೂ ವಿಮಾನ ನಿಲ್ದಾಣದ ನಿಯಂತ್ರಣ ಟವರ್ ನಡುವಣ ಸಂಭಾಷಣೆಯ ಧ್ವನಿಮುದ್ರಿಕೆಯನ್ನು ಪರಿಣಿತರು ಇರಾನ್ ಗೆ ರವಾನಿಸಲು ಶುಕ್ರವಾರವೇ ಅನುಮತಿ ನೀಡಲಾಗಿದೆ ಎಂದು ಉಕ್ರೆನ್ ಹೇಳಿದೆ. 

ವಿಮಾನ ಪತನದ ಬಗ್ಗೆ ವಿಚಾರಣೆ ನಡೆಸಲು ಅಮೆರಿಕಾ, ಉಕ್ರೆನ್, ಕೆನಡಾ ಮತ್ತಿತರ ರಾಷ್ಟ್ರಗಳನ್ನು ತೆಹ್ರನ್ ಆಹ್ವಾನಿಸಿದೆ. ತೆಹ್ರನ್ ನಿಂದ ಕಿವ್ ಕಡೆಗೆ ತೆರಳುತ್ತಿದ್ದ ವಿಮಾನದಲ್ಲಿ ಇರಾನ್, ಕೆನಡಾ ರಾಷ್ಟ್ರದವರೆ ಹೆಚ್ಚಾಗಿದ್ದರು ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com