ನಿಲ್ಲದ ಸಂಘರ್ಷ: ಇರಾಕ್‌ನಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ರಾಕೆಟ್ ದಾಳಿ, 4 ಸೈನಿಕರಿಗೆ ಗಾಯ

ಇರಾನ್ ಮಹಾ ದಂಡ ನಾಯಕ ಖಾಸೀಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಇತ್ತೀಚೆಗೆ ಇರಾಕ್ ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿತ್ತು. ಇದು ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಸಿತ್ತು.
ಇರಾಕ್ ಸೈನಿಕರು
ಇರಾಕ್ ಸೈನಿಕರು

ಬಾಗ್ದಾದ್: ಇರಾನ್ ಮಹಾ ದಂಡ ನಾಯಕ ಖಾಸೀಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಇತ್ತೀಚೆಗೆ ಇರಾಕ್ ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿತ್ತು. ಇದು ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಸಿತ್ತು.

ಇದಾದ ನಂತರ ಎರಡು ದೇಶಗಳು ಸುಮ್ಮನಾಗಿದ್ದವು. ಇದೀಗ ಮತ್ತೆ ಇರಾಕ್ ನ ಬಲಾದ್ ನಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ರಾಕೆಟ್ ದಾಳಿ ನಡೆದಿದೆ. 

ಬಲಾದ್ ನಲ್ಲಿನ ವಾಯುನೆಲೆ ಮೇಲೆ ಎಂಟು ರಾಕೆಟ್ ನಿಂದ ದಾಳಿ ಮಾಡಲಾಗಿದ್ದು ಇದರಲ್ಲಿ ನಾಲ್ವರು ಇರಾಕ್ ಸೈನಿಕರಿಗೆ ಗಾಯಗೊಂಡಿರುವುದಾಗಿ ಇರಾಕ್ ಪ್ರಧಾನಿ ಕಚೇರಿ ದೃಢಪಡಿಸಿದೆ. 

ಸದ್ಯ ರಾಕೆಟ್ ದಾಳಿ ನಡೆಸಿದವರ ಕುರಿತು ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com