ಚೀನಾ: ಬಸ್ ನೇ ನುಂಗಿದ ರಸ್ತೆ ಕುಸಿತ!, ಇಬ್ಬರ ಸಾವು!-ವಿಡಿಯೋ ವೈರಲ್

ಸಿಗ್ನಲ್ ನಲ್ಲಿ ನಿಂತಿದ್ದ ಬಸ್ ರಸ್ತೆ ಕುಸಿತದಿಂದ ಉಂಟಾದ ಗುಂಡಿಯೊಳಗೆ ಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ. 

Published: 14th January 2020 04:22 PM  |   Last Updated: 14th January 2020 04:22 PM   |  A+A-


WATCH | Six killed, four missing after huge sinkhole swallows bus in China

ಚೀನಾ: ಬಸ್ ನೇ ನುಂಗಿದ ರಸ್ತೆ ಕುಸಿತ!, ಇಬ್ಬರ ಸಾವು!

Posted By : Srinivas Rao BV
Source : The New Indian Express

ಬೀಜಿಂಗ್: ಸಿಗ್ನಲ್ ನಲ್ಲಿ ನಿಂತಿದ್ದ ಬಸ್ ರಸ್ತೆ ಕುಸಿತದಿಂದ ಉಂಟಾದ ಗುಂಡಿಯೊಳಗೆ ಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ. 

ವಾಯುವ್ಯ ಚೀನಾದಲ್ಲಿ ನಡೆದಿರುವ ಈ ಘಟನೆಯಲ್ಲಿ 6 ಜನರು ಸಾವನ್ನಪ್ಪಿದ್ದು, 4 ಜನರು ನಾಪತ್ತೆಯಾಗಿದ್ದಾರೆ. ವಾಹನ ಕುಸಿಯುತ್ತಿದ್ದಂತೆಯೇ ಜನರು ಅಲ್ಲಿಂದ ಓಡುತ್ತಿರುವುದು ವಿಡಿಯೋ ದೃಶ್ಯಗಳಲ್ಲಿ ಸೆರೆಯಾಗಿದೆ. 

ಅಲ್ಲಿನ ಸರ್ಕಾರಿ ಮಾಧ್ಯಮ ನೀಡಿರುವ ಮಾಹಿತಿಯ ಪ್ರಕಾರ ವಿಡಿಯೋದಲ್ಲಿ ದಾಖಲಾಗಿರುವ ದೃಶ್ಯಕ್ಕಿಂತ ವಾಸ್ತವದಲ್ಲಿ ರಸ್ತೆ ಕುಸಿತದಿಂದ ಉಂಟಾಗಿರುವ ಗುಂಡಿ ಬೃಹದಾಕಾರವಾಗಿದ್ದು, ಸ್ಫೋಟವೂ ಸಂಭವಿಸಿದೆ ಎಂದು ತಿಳಿದುಬಂದಿದೆ. 

ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, 1,000 ಕ್ಕೂ ಹೆಚ್ಚು ಮಂದಿ ತೊಡಗಿದ್ದಾರೆ. 
 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp