ಸಿಎಎ ಬಗ್ಗೆ ಮೈಕ್ರೋಸಾಫ್ಟ್  ಸಿಇಒ ಸತ್ಯ ನಾಡೆಲ್ಲಾ ಏನಾಂತರೆ ಗೊತ್ತಾ?

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಐಟಿ ದಿಗ್ಗಜ ಮೈಕ್ರೋಸಾಪ್ಟ್ ಕಂಪನಿ ಸಿಇಒ ಭಾರತೀಯ ಮೂಲದ  ಸತ್ಯ ನಡೆಲ್ಲಾ ಕಳವಳ ವ್ಯಕ್ತಪಡಿಸಿದ್ದು, ದೇಶದ ಸ್ಥಿತಿ  ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದ ವಲಸಿಗರು ಭಾರತದಲ್ಲಿ ಹೆಚ್ಚಾಗಲಿದ್ದಾರೆ ಎಂದಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ನ್ಯೂಯಾರ್ಕ್: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಐಟಿ ದಿಗ್ಗಜ ಮೈಕ್ರೋಸಾಪ್ಟ್ ಕಂಪನಿ ಸಿಇಒ ಭಾರತೀಯ ಮೂಲದ  ಸತ್ಯ ನಡೆಲ್ಲಾ ಕಳವಳ ವ್ಯಕ್ತಪಡಿಸಿದ್ದು, ದೇಶದ ಸ್ಥಿತಿ  ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದ ವಲಸಿಗರು ಭಾರತದಲ್ಲಿ ಹೆಚ್ಚಾಗಲಿದ್ದಾರೆ ಎಂದಿದ್ದಾರೆ.

ಮ್ಯಾನ್ಹ್ಯಾಟನ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ನ್ಯೂಯಾರ್ಕ್ ಮೂಲಕ ಪತ್ರಿಕೆಯೊಂದರ ಸಂಪಾದಕರೊಂದಿಗೆ ಮಾತನಾಡಿದ ಸತ್ಯ ನಾಡೆಲ್ಲಾ, ಭಾರತದಲ್ಲಿ ನಡೆಯುತ್ತಿರುವುದು ತಮಗೆ ಬೇಸರ ಮೂಡಿಸಿದೆ. ಸಿಎಎ ಬೇಡವಾಗಿತ್ತು. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶಿಯರೇ ಭಾರತದಲ್ಲಿ ತುಂಬಲಿದ್ದು, ಇನ್ಫೋಸಿಸ್ ನ ಮುಂದಿನ ಸಿಇಒ ಆಗಲಿದ್ದಾರೆ ಎಂದರು.

ಪ್ರತಿಯೊಂದು ದೇಶವು ತನ್ನ ಗಡಿ  ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಿಕೊಳ್ಳುತ್ತವೆ. ಅಲ್ಲದೇ ಅದಕ್ಕೆ ತಕ್ಕಂತೆ ವಲಸೆ ನೀತಿಯನ್ನು ರೂಪಿಸುತ್ತವೆ.  ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ  ಜನರು ಮತ್ತು ಅವರ ಸರ್ಕಾರಗಳು ಆ ಮಿತಿಗಳಲ್ಲಿ ಚರ್ಚಿಸಿ ವ್ಯಾಖ್ಯಾನಿಸುತ್ತವೆ. "ನಾನು ನನ್ನ ಭಾರತೀಯ ಪರಂಪರೆಯಿಂದ ರೂಪುಗೊಂಡಿದ್ದೇನೆ, ಬಹುಸಂಸ್ಕೃತಿ ಭಾರತದಲ್ಲಿ ಬೆಳೆದಿದ್ದೇನೆ. ವಲಸಿಗನಾಗಿ ಅಮೆರಿಕಾಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.

ವಲಸಿಗರ ಭಾರತೀಯ ಸಮಾಜ ಮತ್ತು ಆರ್ಥಿಕತೆಗೆ ಹೆಚ್ಚಿನ ಲಾಭವನ್ನು ನೀಡುವ  ಬಹುರಾಷ್ಟ್ರೀಯ ಸಂಸ್ಥೆಯನ್ನು ಮುನ್ನಡೆಸುವ ಆಕಾಂಕ್ಷೆ ಹೊಂದಿದವರಾಗಿಬೇಕಾಗುತ್ತದೆ ಎಂಬುದು ತಮ್ಮ ಆಶಯವಾಗಿದೆ ಎಂದು ಸತ್ಯ ನಾಡೆಲ್ಲಾ ಹೇಳಿದ್ದಾರೆ. 

ಕಳೆದ ವರ್ಷ ಡಿಸೆಂಬರ್ 11 ರಂದು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಕೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ 2020 ರ ಜನವರಿ 10 ರಿಂದ ಜಾರಿಗೆ ಬಂದಿದೆ ಎಂದು ಕೇಂದ್ರವು ಕಳೆದ ವಾರ ಗೆಜೆಟ್ ಅಧಿಸೂಚನೆಯನ್ನು ಬಿಡುಗಡೆ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com