ಹೊಸ ವರ್ಷದಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆ!

ಎರಡು ವಾರಗಳ ಹಿಂದೆ ಕಾಣೆಯಾಗಿದ್ದ 4 ವರ್ಷದ ಭಾರತೀಯ ಮೂಲದ ಮಹಿಳೆ ಅಮೆರಿಕದ ಇಲಿನಾಯ್ಸ್ ರಾಜ್ಯದಲ್ಲಿ ತನ್ನ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಈಕೆಯ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿದೆ ಎಂದು  ಮಾಧ್ಯಮ ವರದಿಗಳು ತಿಳಿಸಿವೆ.

Published: 17th January 2020 03:30 PM  |   Last Updated: 17th January 2020 03:30 PM   |  A+A-


ಹೊಸ ವರ್ಷದಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆ!

Posted By : Raghavendra Adiga
Source : PTI

ನ್ಯೂಯಾರ್ಕ್ :ಎರಡು ವಾರಗಳ ಹಿಂದೆ ಕಾಣೆಯಾಗಿದ್ದ 4 ವರ್ಷದ ಭಾರತೀಯ ಮೂಲದ ಮಹಿಳೆ ಅಮೆರಿಕದ ಇಲಿನಾಯ್ಸ್ ರಾಜ್ಯದಲ್ಲಿ ತನ್ನ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಈಕೆಯ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿದೆ ಎಂದು  ಮಾಧ್ಯಮ ವರದಿಗಳು ತಿಳಿಸಿವೆ.

ಡಿಸೆಂಬರ್ 30 ರಂದು ಇಲಿನಾಯ್ಸ್‌ನ ಸ್ಚಂಬರ್ಗ್‌ನಲ್ಲಿರುವ ತನ್ನ ಮನೆಗೆ ಹೊರಟಿದ್ದ ಮಹಿಳೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು.  ಜನವರಿ 1 ರಂದು ಸುರೇಲ್ ದಬಾವಾಲಾ ಅವರು ತಮ್ಮ ಮಡದಿ ಕಾಣೆಯಾಗಿದ್ದಾಳೆ ಎಂದು  ಸ್ಚಂಬರ್ಗ್ ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ. ಆಕೆ ಜಿಮ್ ನಲ್ಲಿ ವರ್ಕ್ ಔಟ್ ಮಾಡಲೆಂದು ತೆರಳಿದ್ದಳು ಕಡೆಯದಾಗಿ ಆಕೆ ತನ್ನ ಕಾರ್ ಡ್ರೈವ್ ಮಾಡುತ್ತಿದ್ದಳು, ಆದರೆ ಆಕೆ ಮತ್ತೆಂದೂ ಮನೆಗೆ ಮರಳಲಿಲ್ಲ ಎಂಬುದಾಗಿ  ಚಿಕಾಗೊ ಟ್ರಿಬ್ಯೂನ್ ಉಲ್ಲೇಖಿಸಿದೆ.

ಸೋಮವಾರ, ಚಿಕಾಗೊ ಪೊಲೀಸ್ ಇಲಾಖೆ ಸ್ಚಂಬರ್ಗ್ ಪೊಲೀಸರನ್ನು ಸಂಪರ್ಕಿಸಿ, ಬಿಳಿ ಸೆಡಾನ್ ಕಾರನ್ನು ಚಿಕಾಗೋದ ಗ್ಯಾರಿಫೀಲ್ಡ್ ಪಾರ್ಕ ನಲ್ಲಿರುವುದನ್ನು ತಿಳಿಸಿದೆ. ಆಕಾರ್ ಡಿಕ್ಕಿ ತೆರೆದಾಗ ಕಾಣೆಯಾಗಿದ್ದ ಮಹಿಳೆ ಶವವು ಪತ್ತೆಯಾಗಿದೆ.

ಚಿಕಾಗೊ ಪೊಲೀಸ್ ಇಲಾಖೆ ಇದೊಂದು ಅನುಮಾನಾಸ್ಪದ ಸಾವಿನ ಪ್ರಕರಣ ಎಂದು ತನಿಖೆ ನಡೆಸುತ್ತಿದೆ.ಇನ್ನು ದಬಾವಾಲಾ  ಅವರ ಕುಟುಂಬದಿಂದ ನೇಮಕಗೊಂಡ ಖಾಸಗಿ ತನಿಖಾಧಿಕಾರಿಗಳು ಆಕೆಯ ಕಾರನ್ನು ಪತ್ತೆ ಮಾಡಿ ಪೋಲೀಸರಿಗೆ ತಿಳಿಸಿದ್ದಾರೆ.ಆಕೆಯ ತಂದೆ ಕಾರಿನ ಕೀಲಿಗಳೊಂದಿಗೆ ಬಂದ ನಂತರ ಕಾರಿನ ಡಿಕ್ಕಿ ತೆರೆಯಲಾಗಿದೆ. ಅದರಲ್ಲಿ ಮಹಿಳೆಯ ಶವವು ಕಂಬಳಿಯನ್ನು ಸುತ್ತಿಕೊಂಡಿರುವಂತೆ ಪತ್ತೆಯಾಗಿದೆ ಆಗ ಅಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ವೈದ್ಯಕೀಯ ಪರೀಕ್ಷಕರ ಕಚೇರಿ ಮಂಗಳವಾರ ಆಕೆಯಗುರುತನ್ನು ಬಿಡುಗಡೆಗೊಳಿಸಿದೆ.ಆದರೆ, ಶವಪರೀಕ್ಷೆಯ ಫಲಿತಾಂಶವನ್ನು ಇನ್ನೂ ಪೂರ್ಣಗೊಳಿಸಿಲ್ಲ ಟಾಕ್ಸಿಕಾಲಜಿ ಫಲಿತಾಂಶಗಳು ಬರಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ,. 

ಶವಪರೀಕ್ಷೆ ಪ್ರಕರಣಗಳಲ್ಲಿ, ಆ ಫಲಿತಾಂಶಗಳು ಲಭ್ಯವಾಗುವವರೆಗೆ ತನಿಖೆಯ ಯಾವುದೇ ವಿವರಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕುಕ್ ಕೌಂಟಿ ಬ್ಯೂರೋ ಆಫ್ ಅಡ್ಮಿನಿಸ್ಟ್ರೇಶನ್‌ನ ಸಂವಹನ ನಿರ್ದೇಶಕಿ ನಟಾಲಿಯಾ ಡೆರೆವ್ಯಾನಿ ಅವರು ಡೈಲಿಹಾರ್ಲ್ಡ್.ಕಾಮ್ ಗೆ ತಿಳಿಸಿದ್ದಾರೆ. ತನ್ನ ತಂಗಿಗೆ ಏನಾಯಿತು ಎಂದು ನಮಗಿನ್ನೂ ಖಚಿತವಾಗಿಲ್ಲ ಎಂದು ಮೃತ ಮಹಿಳೆಯ ಸಹೋದರಿ ಹೇಳಿದ್ದಾರೆ, ಮತ್ತು ಅವರು ಅಂತಿಮ ಕ್ಷಣಗಳ ಬಗೆಗೆ ಹೆಚ್ಚಿನ ವಿವರ ಕೊಡುವ ಮುನ್ನ ಪೊಲೀಸರಿಂದ  ಶವಪರೀಕ್ಷೆಯ ಮಾಹಿತಿಗಾಗಿ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ದಬಾವಾಲಾ ಚಿಕಾಗೋ ವಿಶ್ವವಿದ್ಯಾನಿಲಯದಿಂದ  ಎಂಬಿಎಪದವಿ ಪಡೆದಿದ್ದರು.ವೈದ್ಯನಾಗಿರುವ ತನ್ನ ತಂದೆಯಿಂದ ನಿರ್ವಹಿಸಲ್ಪಡುವ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಜಾಲತಾಣವೊಂದು ವರದಿ ಮಾಡಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp