ಬಂಧನಕ್ಕೀಡಾದ ಇಸಿಸ್ ಉಗ್ರನ ರವಾನೆ ಮಾಡಲು ಹರ ಸಾಹಸ ಪಟ್ಟ ಭದ್ರತಾ ಪಡೆಗಳು!

ಇರಾಕ್ ನಲ್ಲಿ ಭದ್ರತಾ ಪಡೆಗಳ ನಿದ್ರೆಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ದೈತ್ಯ ಉಗ್ರನೋರ್ವ ಬಂಧನಕ್ಕೀಡಾಗಿದ್ದು, ಆತನನ್ನು ರವಾನೆ ಮಾಡಲು ಭದ್ರತಾ ಪಡೆಗಳು ಹರ ಸಾಹಸಪಟ್ಟಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗ್ದಾದ್: ಇರಾಕ್ ನಲ್ಲಿ ಭದ್ರತಾ ಪಡೆಗಳ ನಿದ್ರೆಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ದೈತ್ಯ ಉಗ್ರನೋರ್ವ ಬಂಧನಕ್ಕೀಡಾಗಿದ್ದು, ಆತನನ್ನು ರವಾನೆ ಮಾಡಲು ಭದ್ರತಾ ಪಡೆಗಳು ಹರ ಸಾಹಸಪಟ್ಟಿವೆ.

ಹೌದು.. ಭದ್ರತಾ ಪಡೆಗಳ ವಿರುದ್ಧ ಜೀವ ಇರುವವರೆಗೆ ಹೋರಾಡುವಂತೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವಂತೆ ಭಯೋತ್ಪಾದಕ ಸಂಘಟನೆ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಹೆಸರಿನಲ್ಲಿ ಸಾಲುಸಾಲು ಫತ್ವಾ ಹೊರಡಿಸುತ್ತಿದ್ದ ದೈತ್ಯ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿ ಅಲಿಯಾಸ್ ಜಬ್ಬಾ ದಿ ಜಿಹಾದಿಯನ್ನು ಇರಾಕ್‌ನ ವಿಶೇಷ ಕಾರ್ಯಪಡೆ ಸೈನಿಕರು ಬಂಧಿಸಿದ್ದಾರೆ. ಸುಮಾರು 250 ಕೆಜಿ ತೂಕದ ಜಬ್ಬಾ ಇರುವ ಜಾಗವನ್ನು ಪತ್ತೆ ಹಚ್ಚಿದ ವಿಶೇಷ ಕಾರ್ಯಪಡೆ ಸಿಬ್ಬಂದಿ ಅವನನ್ನು ಬಂಧಿಸಲು ಮುಂದಾದರು. ಆದರೆ ಅವನನ್ನು ಬಂಧಿಸಲೆಂದು  ತಂದಿದ್ದ ಕಾರಿನೊಳಗೆ ಜಬ್ಬಾ ಹಿಡಿಸುತ್ತಿರಲಿಲ್ಲ. ಕೊನೆಗೆ ಮಿನಿಟ್ರಕ್ ತರಿಸಿ, ಅದರಲ್ಲಿ ಜಬ್ಬಾನನ್ನು ಮಲಗಿಸಿಕೊಂಡು ಹೋದರು ಎಂದು ಸುದ್ದಿಸಂಸ್ಛೆ ವರದಿ ಮಾಡಿದೆ.

ಅಲ್ಲದೆ ಅಬ್ದುಲ್ ಬಾರಿ ಬಂಧನದ ಬಗ್ಗೆ ಲಂಡನ್‌ನಲ್ಲಿ ನೆಲೆಸಿರುವ ಇಸ್ಲಾಮಿಕ್ ಮೂಲಭೂತವಾದ ವಿರೋಧಿ ಹೋರಾಟಗಾರ ಮಾಜಿದ್ ನವಾಜ್ ಫೇಸ್‌ಬುಕ್‌ನಲ್ಲಿ ಚಿತ್ರ ಸಹಿತ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ. 'ಅಬ್ದುಲ್ ಬಾರಿ ಬಂಧನದಿಂದ ಹರಿದುಹಂಚಿ ಹೋಗಿರುವ ಐಸಿಸ್ ಸಂಘಟನೆಗೆ ಮತ್ತಷ್ಟು ಹಿನ್ನಡೆ ಉಂಟಾಗಿದೆ. ಜನರನ್ನು ಕೊಲ್ಲಲು ಮತ್ತು ಆತ್ಮಾಹುತಿಗೆ ಮುಂದಾಗಲು ಇವನು ಸಾಕಷ್ಟು ಫತ್ವಾಗಳನ್ನು ಹೊರಡಿಸಿದ್ದ. ಮಾನವೀಯತೆಯ ವಿರುದ್ಧ ಐಸಿಸ್ ನಡೆಸುತ್ತಿದ್ದ ಎಲ್ಲ ಬಗೆಯ ದೌರ್ಜನ್ಯಗಳನ್ನೂ ಇಸ್ಲಾಂ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದ್ದ' ಎಂದು ಮಾಜಿದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com