ಸಮುದ್ರ ತಡೆಗೋಡೆ ಮೂರ್ಖತನ, ದುಬಾರಿ ಕಲ್ಪನೆ: ಟ್ರಂಪ್ ಕೆಂಗಣ್ಣು

ನ್ಯೂಯಾರ್ಕ್ ನಗರವನ್ನು ಬಿರುಗಾಳಿಗಳಿಂದ ರಕ್ಷಿಸಲು ಗೋಡೆ ನಿರ್ಮಿಸುವ ಆಲೋಚನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿ, ಇದೊಂದು ಮೂರ್ಖತನ ಮತ್ತು "ದುಬಾರಿ ಕಲ್ಪನೆ ಎಂದೂ ಜರಿದಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಮಾಸ್ಕೋ: ನ್ಯೂಯಾರ್ಕ್ ನಗರವನ್ನು ಬಿರುಗಾಳಿಗಳಿಂದ ರಕ್ಷಿಸಲು ಗೋಡೆ ನಿರ್ಮಿಸುವ ಆಲೋಚನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿ, ಇದೊಂದು ಮೂರ್ಖತನ ಮತ್ತು "ದುಬಾರಿ ಕಲ್ಪನೆ ಎಂದೂ ಜರಿದಿದ್ದಾರೆ.

ವರದಿಗಳ ಪ್ರಕಾರ, ನ್ಯೂಯಾರ್ಕ್‌ನ ಬಂದರಿನಲ್ಲಿ ಕೆಲವು ಮೈಲುಗಳಷ್ಟು ದೂರದಲ್ಲಿ ದೈತ್ಯ ತಡೆಗೋಡೆ ನಿರ್ಮಾಣವು ಸೇನೆಯ ಯೋಜನೆಗಳಲ್ಲಿ ಒಂದಾಗಿದೆ, ನಗರವನ್ನು ಆಗಾಗ್ಗೆ ಬಿರುಗಾಳಿಗಳಿಂದ ರಕ್ಷಿಸುವ ಗುರಿಯನ್ನು ಹೊಂದಿದ್ದು, ಯೋಜನೆಯ ವೆಚ್ಚವನ್ನು 119 ಬಿಲಿಯನ್ ಎಂದು ಅಂದಾಜು ಮಾಡಲಾಗಿದ್ದು, ನಿರ್ಮಾಣವು 25 ವರ್ಷಗಳವರೆಗೆ ತೆಗೆದುಕೊಳ್ಳಬಹುದು.

ಅಪರೂಪದ ಬಿರುಗಾಳಿಗಳಿಂದ ರಕ್ಷಿಸಲು ನ್ಯೂಯಾರ್ಕ್ ಸುತ್ತಲೂ ನಿರ್ಮಿಸಲಾಗುವ ಬೃಹತ್ 200 ಬಿಲಿಯನ್ ಡಾಲರ್ ಸಮುದ್ರ ಗೋಡೆಯು, ಅಗತ್ಯವಿದ್ದಾಗ, ಕೆಲಸ ಮಾಡುವುದಿಲ್ಲ ಮೇಲಾಗಿ ದುಬಾರಿ, ಮೂರ್ಖ ಮತ್ತು ಪರಿಸರ ಸ್ನೇಹಿಯಲ್ಲದ ಕಲ್ಪನೆಯಾಗಿದೆ ಎಂದು ಟ್ರಂಪ್ ಟ್ವಿಟರ್‌ ಯೋಜನೆಯನ್ನು ಬಲವಾಗಿ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com