ಅಧಿಕೃತವಾಗಿ ಅರಮನೆ ಜವಾಬ್ದಾರಿ ತೊರೆದ ಪ್ರಿನ್ಸ್ ಹ್ಯಾರಿ, ಮೇಘನ್ ದಂಪತಿ

ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ್ದು, ಸಾಮಾನ್ಯ ಜೀವನ ನಡೆಸಲು ಮುಂದಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ್ದು, ಸಾಮಾನ್ಯ ಜೀವನ ನಡೆಸಲು ಮುಂದಾಗಿದ್ದಾರೆ.

ಈ ಕುರಿತಂತೆ ಬಕಿಂಗ್ ಹ್ಯಾಮ್ ಅರಮನೆ ಅಧಿಕೃತ ಘೋಷಣೆ ಹೊರಡಿಸಿದ್ದು, 'ರಾಜ ಮನೆತನದ ಈ ದಂಪತಿ ಇನ್ನು ಅವರ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಮತ್ತು 2020ರ ವಸಂತ ಋತುವಿನಿಂದಲೇ ಅರಮನೆ ಹೊಸ ವ್ಯವಸ್ಥೆಗಳು ಜಾರಿಯಾಗಲಿವೆ ಎಂದು ತಿಳಿಸಿದೆ.

ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಹ್ಯಾರಿ ಮತ್ತು ಮೇಘನ್​ ದಂಪತಿ ರಾಜ ಮನೆತನದ ವೈಭೋಗಗಳನ್ನು ತೊರೆಯುವುದಾಗಿ ಘೋಷಿಸಿದ್ದರು. ರಾಜ ಮನೆತನಕ್ಕೆ ಇರುವ ಗೌರವಗಳಾದ ಘನತೆವೆತ್ತ ರಾಜ ಮತ್ತು ರಾಣಿ ಎಂಬ ಪದನಾಮಗಳನ್ನು ಬೇಡ ಎಂದಿದ್ದರು. ಪ್ರಿನ್ಸ್ ಚಾರ್ಲ್ಸ್ ಅವರೊಂದಿಗೆ ವಿಚ್ಚೇದನ ಪಡೆದಿದ್ದ ಹ್ಯಾರಿ ಅವರ ತಾಯಿ ಡಯನಾ ಅವರೂ ತಮ್ಮ ಹೆಸರಿನೊಂದಿಗಿದ್ದ ಘನತೆವೆತ್ತ ಎಂಬ ಪದನಾಮವನ್ನು ತೆಗೆದುಹಾಕಿದ್ದರು. ಆದರೆ ಹ್ಯಾರಿ ಅವರು ರಾಜ ಮನೆತನದ ವೈಭೋಗಗಳನ್ನು ತೊರೆದರೂ ಅವರು ಬ್ರಿಟಿಷ್​ ಸಿಂಹಾಸನದ ದೊರೆಯಾಗಿರಲಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಅರಮನೆ ಜತೆಗಿನ ಒಪ್ಪಂದದಲ್ಲಿ ಹ್ಯಾರಿ ದಂಪತಿ ಅವರು ವಿಂಡ್ಸರ್​ ಕಾಸ್ಟಲ್ ​ನ ತಮ್ಮ ಮನೆಯ ನವೀಕರಣಕ್ಕಾಗಿ ವೆಚ್ಚ ಮಾಡಿರುವ ಸಾರ್ವಜನಿಕರ ತೆರಿಗೆ ಮೊತ್ತ 2.4 ಮಿಲಿಯನ್​ ಪೌಂಡ್ಸ್​ಗಳನ್ನು ಮರಳಿಸಬೇಕೆಂದು ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com