ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ 3 ರಾಕೆಟ್‌

ಮಧ್ಯ ಬಾಗ್ದಾದ್‌ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Published: 21st January 2020 11:34 AM  |   Last Updated: 21st January 2020 11:34 AM   |  A+A-


3 rockets hit near US embassy

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಬಾಗ್ದಾದ್: ಮಧ್ಯ ಬಾಗ್ದಾದ್‌ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಮಧ್ಯರಾತ್ರಿ ಮೂರು ರಾಕೆಟ್‌ಗಳು ಹಸಿರು ವಲಯದ ಅಮೆರಿಕ ರಾಯಭಾರಿ ಕಚೇರಿಯ ಬಳಿ ಅಪ್ಪಳಿಸಿವೆ. ಈ ಪ್ರದೇಶದಲ್ಲಿ ಇರಾಕಿನ ಪ್ರಮುಖ ಸರ್ಕಾರಿ ಕಚೇರಿಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದರು. ಸಾವು-ನೋವುಗಳ ಬಗ್ಗೆ ತಕ್ಷಣ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಇರಾನ್​​ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿಯನ್ನು ಅಮೆರಿಕ ಹತ್ಯೆ ಮಾಡಿದ ಬಳಿಕ ಎರಡು ರಾಷ್ಟ್ರಗಳ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇರಾನ್​ ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಬಾಗ್ದಾದ್​​​ನ  ಅಮೆರಿಕ ರಾಯಭಾರಿ ಕಚೇರಿಯ ಗ್ರೀನ್​ ಜೋನ್​ಅನ್ನು ಗುರಿಯಾಗಿಸಿಕೊಂಡು ರಾಕೆಟ್​​ ದಾಳಿ ನಡೆಸಲಾಗಿದೆ. 

ರಾಕೆಟ್​​ಗಳು ಅಪ್ಪಳಿಸಿದ ಕೂಡಲೇ ಗ್ರೀನ್​ ಜೋನ್​ನಲ್ಲಿ ಸೈರನ್​ ಕೂಗಲು ಆರಂಭಿಸಿತ್ತು. ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಇತ್ತೀಚೆಗೆ ಅಮೆರಿಕ ರಾಯಭಾರಿ ಕಚೇರಿಯ ಗ್ರೀನ್​ ಜೋನ್​ ಮೇಲೆ ಇರಾನ್​ ಬೆಂಬಲಿತ ಪ್ಯಾರಾ ಮಿಲಿಟರಿ ಪಡೆಯು ಇದೇ ರೀತಿ ದಾಳಿ ನಡೆಸಿತ್ತು ಎಂದು ಅಮೆರಿಕ ಆರೋಪಿಸಿದೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp