ರಾಣಿ ಎಲಿಜಬೆತ್ II
ರಾಣಿ ಎಲಿಜಬೆತ್ II

ಬ್ರೆಕ್ಸಿಟ್ ಕಾಯ್ದೆಗೆ ಬ್ರಿಟನ್ ರಾಣಿ ಅನುಮೋದನೆ

 ಈ ತಿಂಗಳ ಕೊನೆಯಲ್ಲಿ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಲು ಸಹಕಾರಿಯಾಗುವ ಕಾನೂನಿಗೆ ಬ್ರಿಟನ್ ರಾಣಿ ಎಲಿಜಬೆತ್ II ಗುರುವಾರ ಔಪಚಾರಿಕ ಅನುಮೋದನೆ ನೀಡಿದ್ದಾರೆ. 

ಲಂಡನ್: ಈ ತಿಂಗಳ ಕೊನೆಯಲ್ಲಿ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಲು ಸಹಕಾರಿಯಾಗುವ ಕಾನೂನಿಗೆ ಬ್ರಿಟನ್ ರಾಣಿ ಎಲಿಜಬೆತ್ II ಗುರುವಾರ ಔಪಚಾರಿಕ ಅನುಮೋದನೆ ನೀಡಿದ್ದಾರೆ.

ಬ್ರಿಟನ್ ರಾಣಿ ಇದೀಗ ಬ್ರೆಕ್ಸಿಟ್ ಗೆ ರಾಜಮುದ್ರೆಯನ್ನು ಒತ್ತಿದ್ದಾರೆ ಮುಂದೆ ಇದುವೇ ಬ್ರೆಕ್ಸಿಟ್ ಕಾಯ್ದೆಯಾಗಲಿದೆ ಎಂದು ಬ್ರೆಕ್ಸಿಟ್ ಕಾರ್ಯದರ್ಶಿ ಸ್ಟೀವ್ ಬಾರ್ಕ್ಲೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಕಾನೂನಾಗಿ ಪರಿವರ್ತನೆಯಾಗುವ ಬ್ರೆಕ್ಸಿಟ್ ಕಾಯ್ದೆಯ ಅನುಸಾರ ಯುಕೆ ಜನವರಿ 31 ರಂದು ಯುರೋಪಿಯನ್ ಒಕ್ಕೂಟ ತೊರೆಯಲು ಅನುವು ಮಾಡಿಕೊಡುತ್ತದೆ.

ಇದಕ್ಕೆ ಮುನ್ನ ಬುಧವಾರ ಬ್ರಿಟನ್ ಸಂಸತ್ತಿನಲ್ಲಿ ಸಾಕಷ್ಟು ಗಹನ ಚರ್ಚೆಯ ಬಳಿಕ ಬ್ರೆಕ್ಸಿಟ್ ಕಾಯ್ದೆ ಅಂಗೀಕಾರವಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com