ದಕ್ಷಿಣ ಜರ್ಮನಿಯಲ್ಲಿ ಅನಾಮಧೇಯ ವ್ಯಕ್ತಿಯಿಂದ ಗುಂಡಿನ ದಾಳಿ, ಆರು ಮಂದಿ ಸಾವು

ನೈಋತ್ಯ ಜರ್ಮನಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಫ್ರಾಂಕ್ ಫರ್ಟ್: ನೈಋತ್ಯ ಜರ್ಮನಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ವೈಯುಕ್ತಿಕ ದ್ವೇಷದ ಹಿನ್ನೆಲೆ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು ರಾಟ್ ಆಮ್ ಸೀ ಪಟ್ಟಣದಲ್ಲಿ ದುಷ್ಕರ್ಮಿಯು ಗುಂಡಿನ ದಾಳಿ ಪ್ರಾರಂಭಿಸಿದ್ದನು.ಸಂತ್ರ್ಸ್ಥರೊಡನೆ ಸಂಬಂಧ ಹೊಂದಿರುವ  ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಇತರ ಬಂದೂಕುಧಾರಿಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂದು ಪೊಲೀಸರು ಎಎಫ್‌ಪಿಗೆ ತಿಳಿಸಿದ್ದಾರೆ.

ಶಂಕಿತನು ಜರ್ಮನ್ ನಾಗರಿಕನೆಂದು ಅವರು ಸ್ಥಳೀಯ ಟಿವಿಗೆ ಮಾಹಿತಿ ಕೊಟ್ಟಿದ್ದಾರೆ. ಸುಮಾರು 12: 45 ಕ್ಕೆ (1145 ಜಿಎಂಟಿ) ಶೂಟಿಂಗ್ನಡೆದ ಬಳಿಕ ಸ್ಥಳೀಯ ಹೋಟೆಲ್ ಮತ್ತು ಸುತ್ತಮುತ್ತ ಮೃತರ ಹಾಗೂ ಗಾಯಾಳುಗಳ ಶೋಧಕ್ಕೆ ಪೋಲೀಸರು ಆಗಮಿಸಿದ್ದಾರೆ. ಕೊಲ್ಲಲ್ಪಟ್ಟ ಜನರು ಶೂಟರ್‌ನ ಕುಟುಂಬ ಸದಸ್ಯರು ಎಂದು ಬಿಲ್ಡ್ ಪತ್ರಿಕೆ ವರದಿ ಮಾಡಿದೆ, ಅಪರಾಧಿ 1983 ರಲ್ಲಿ ಜನಿಸಿದ ವ್ಯಕ್ತಿ ಎಂದು ಎಂದು ಹೇಳಲಾಗಿದೆ.

ಸಂಬಂಧಗಳ ವಿವರಗಳನ್ನು ಅಥವಾ ದುಷ್ಕರ್ಮಿಯ ಗುರುತನ್ನು ಖಚಿತಪಡಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.ಹೈಡೆಲ್ಬರ್ಗ್ ಬಳಿಯ 5,200 ನಿವಾಸಿಗಳಿರಿವ ರೊಟ್ ಆಮ್ ಸೀ ಪಟ್ಟಣದಲ್ಲಿ  ರೈಲು ನಿಲ್ದಾಣದ ಬಳಿ ಗುಂಡಿನ ದಾಳಿ ನಡೆದಿದೆ.

ಜರ್ಮನಿಯಲ್ಲಿ ಬಂದೂಕುಗಳನ್ನು ಹೊಂದುವುದು ಕಾನೂನುಬಾಹಿರವಲ್ಲವಾದರೂ, ಹೆಚ್ಚಿನ ಬಂದೂಕುಗಳನ್ನು ಪರವಾನಗಿಯೊಡನೆ ಮಾತ್ರವೇ ಇರಿಸಿಕೊಳ್ಲಬಹುದಾಗಿದೆ.ಮತ್ತು ಅವುಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ,  ದೇಶದಲ್ಲಿ ಇಂತಹಾ ಸಾಮೂಹಿಕ ಗುಂಡಿನ ದಳಿ ಪ್ರಕರಣಗಳು ವಿರಳವಾಗಿ ಸಂಭವಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com