ಚೀನಾದಲ್ಲಿ ಕೊರೋನಾ ವೈರಸ್ ಭೀತಿ: ಊಟ, ಅಗತ್ಯ ವಸ್ತುಗಳಿಲ್ಲದೆ ಸಂಕಷ್ಟದಲ್ಲಿ ತಮಿಳುನಾಡು ವಿದ್ಯಾರ್ಥಿಗಳು

ಚೀನಾದಲ್ಲಿ ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹಚ್ಚಾಗುತ್ತಿದ್ದು, ವೈರಸ್ ನಿಂದಾಗಿ ಭಾರತೀಯ ವಿದ್ಯಾರ್ಥಿಗಳೂ ಕೂಡ ಆತಂಕಕ್ಕೀಡಾಗಿದ್ದಾರೆ. ಈ ನಡುವೆ ವುಹಾನ್ ನಲ್ಲಿ ಬಂದ್ ಆಚರಿಸಲಾಗುತ್ತಿದ್ದು, ತಮ್ಮ ತಮ್ಮ ಕೊಠಡಿಗಳಲ್ಲಿರುವ ವಿದ್ಯಾರ್ಥಿಗಳು ಊಟ ಹಾಗೂ ಅಗತ್ಯ ವಸ್ತುಗಳು ದೊರಕದೆ ಹಲವು ದಿನಗಳಿಂದಲೂ ಸಂಕಷ್ಟ ಜೀವನ ಸಾಗಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುಚಿ: ಚೀನಾದಲ್ಲಿ ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹಚ್ಚಾಗುತ್ತಿದ್ದು, ವೈರಸ್ ನಿಂದಾಗಿ ಭಾರತೀಯ ವಿದ್ಯಾರ್ಥಿಗಳೂ ಕೂಡ ಆತಂಕಕ್ಕೀಡಾಗಿದ್ದಾರೆ. ಈ ನಡುವೆ ವುಹಾನ್ ನಲ್ಲಿ ಬಂದ್ ಆಚರಿಸಲಾಗುತ್ತಿದ್ದು, ತಮ್ಮ ತಮ್ಮ ಕೊಠಡಿಗಳಲ್ಲಿರುವ ವಿದ್ಯಾರ್ಥಿಗಳು ಊಟ ಹಾಗೂ ಅಗತ್ಯ ವಸ್ತುಗಳು ದೊರಕದೆ ಹಲವು ದಿನಗಳಿಂದಲೂ ಸಂಕಷ್ಟ ಜೀವನ ಸಾಗಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಕೊರೋನಾ ವೈರಸ್ ನಿಂದಾಗಿ ಚೀನಾದಲ್ಲಿ ಈ ವರೆಗೂ 41 ಮಂದಿ ಸಾವನ್ನಪ್ಪಿದ್ದು, ಇನ್ನೂ ಸಾವಿರಾರು ಜನರಲ್ಲಿ ವೈರಾಣುಗಳಿರುವ ಶಂಕೆಗಳು ವ್ಯಕ್ತವಾಗಿದೆ. ಇನ್ನು ಭಾರತದಲ್ಲಿಯೂ ಚೀನಾದಿಂದ ಬಂದಿರುವ 10 ಮಂದಿಯ ಆರೋಗ್ಯವನ್ನು ತಪಾಸಣೆ ನಡೆಸಲಾಗುತ್ತಿದೆ. 

ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸಂಕಷ್ಟಗಳ ಕುರಿತು ಮಾತನಾಡಿದ್ದು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಚೀನಾ ಸರ್ಕಾರ ವುಹಾನ್ ನಲ್ಲಿ ಸಂಪೂರ್ಣ ಬಂದ್ ಘೋಷಣೆ ಮಾಡಿದ್ದು, ಇದರ ಪರಿಣಾಮ ಆಹಾರ ಹಾಗೂ ಮಾಸ್ಕ್ ಗಳನ್ನು ದುಬಾರಿ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕೊರೋನಾ ವೈರಸ್ ನಿಂದಾಗಿ ಕೊಠಡಿಗಳಿಂದ ಬರಲು ಸಾಧ್ಯವಾಗುತ್ತಿಲ್ಲ. ಆಹಾರ ಹಾಗೂ ಅಗತ್ಯ ವಸ್ತುಗಳು ಸಿಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದೇವೆ. ಕೆಲವರು ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಬಾಡಿಗೆ ಕೊಠಡಿಗಳಲ್ಲಿಯೇ ಉಳಿದುಕೊಂಡಿದ್ದಾರೆಂದು ಹೇಳಿದ್ದಾರೆ. 

ಸಾಕಷ್ಟು ಬೇಡಿಕೆಗಳ ನಡುವೆಯೂ ನಮಗೆ ಸುರಕ್ಷಿತ ಮಾಸ್ಕ್ ಗಳು ಸಿಗುತ್ತಿಲ್ಲ. ಕೊಠಡಿಗಳಿಂದ ಹೊರಗೆ ಬರಲು ಎಲ್ಲಾ ವಿದ್ಯಾರ್ಥಿಗಳು ಹೆದರುತ್ತಿದ್ದಾರೆ. ವೈರಸ್ ಕುರಿತು ಸಾಕಷ್ಟು ಭೀತಿ ಹುಟ್ಟಿದೆ. ಭಾರತೀಯ ರಾಯಭಾರಿ ಕಚೇರಿಯ ಆಧಿಕಾರಿಗಳು ನಮ್ಮನ್ನು ಸಂಪರ್ಕಿಸಿದ್ದು, ಸಹಾಯಕ್ಕೆ ದೂರವಾಣಿ ಸಂಖ್ಯೆಯನ್ನು ನೀಡಿದೆ ಎಂದು ಚೀನಾದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿ ಮಣಿಶಂಕರ್ ಅವರು ಹೇಳಿದ್ದಾರೆ. 

ಹೊರಗೆ ಮಾಸ್ಕ್ ಗಳನ್ನು ಖರೀದಿ ಮಾಡಲು ಹೊರಡಲೂ ಕೂಡ ಭಯವಾಗುತ್ತಿದೆ. ಪ್ರಸ್ತುತ ಕೊಠಡಿಗಳಲ್ಲಿರುವ ವಸ್ತುಗಳಿಂದಲೇ ಆಹಾರ ತಯಾರಿಸಿಕೊಳ್ಳುತ್ತಿದ್ದೇನೆ. 4-5 ದಿನಗಳಿದ ಕೊಠಡಿಗಳಲ್ಲಿಯೇ ಇದ್ದೇವೆ. ಮುಂದಿನ ಜೀವನದ ಕುರಿತು ಚಿಂತೆ ಆರಂಭವಾಗಿದೆ. ಯಾವಾಗ ನಿರ್ಬಂಧ ಅಂತ್ಯಗೊಳ್ಳುತ್ತದೆ ಎಂಬುದರ ಮಾಹಿತಿ ಕೂಡ ನಮಗಿಲ್ಲ ಎಂದು ತಿಳಿಸಿದ್ದಾರೆ. 

ಮಾಸ್ಕ್ ಖರೀದಿಗೆ ಧೈರ್ಯ ಮಾಡಿ ಹೊರಗೆ ಹೋಗಿದ್ದೆ. ಈ ವೇಳೆ ಅಂಗಡಿಯೇ ಬಂದ್ ಆಗಿತ್ತು. ಮತ್ತೊಂದು ಅಂಗಡಿಯಲ್ಲಿ ಜನರು ಹೆಚ್ಚಾಗಿದ್ದರು. ಹೆಚ್ಚು ಜನರಿರುವ ಜನರ ಮಧ್ಯೆ ಹೋಗುವುದಕ್ಕಿಂತಲೂ ರೂಮ್ ಗಳಲ್ಲಿ ಇರುವುದೇ ಒಳಿತು ಎಂದೆನಿತು ಎಂದಿದ್ದಾರೆ. 

ಭಾರತಕ್ಕೆ ಹಿಂತಿರುಗುವ ಯಾವುದೇ ಆಯ್ಕೆಗಳೂ ನಮ್ಮ ಬಳಿಯಿಲ್ಲ. ಇದೀಗ ವಿದ್ಯಾರ್ಥಿಗಳು ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ವೈರಾಣು ಲಕ್ಷಣ 7 ದಿನಗಳ ಬಳಿಕ ತಿಳಿಯಲಿದ್ದು, ಇದೇ ನಮಗೆ ದೊಡ್ಡ ಸಮಸ್ಯೆಯಾಗಿದೆ. ಒಂದು ವೇಳೆ ಭಾರತಕ್ಕೂ ಈ ವೈರಸ್ ತಗುಲಿ ಬಿಟ್ಟರೆ ಎಂಬ ಕೂಡ ಇದೆ. ಈಗಾಗಲೇ ಚೀನಾದ ಹಲವು ನಗರಗಳಿಗೆ ಈ ವೈರಾಣು ಹರಡಿದೆ. ಕ್ಯಾಂಪಸ್ ಸುರಕ್ಷಿತ ಎಂದೆನಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಲು ಹಾಸ್ಟೆಲ್ ಗಳಲ್ಲಿಯೇ ಉಳಿದುಕೊಂಡಿದ್ದಾರೆಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com