ಜಮ್ಮು-ಕಾಶ್ಮೀರದ ನಾಯಕರನ್ನು ಕೂಡಲೇ ಬಂಧನದಿಂದ ಬಿಡುಗಡೆಗೊಳಿಸಿ- ಭಾರತಕ್ಕೆ ಅಮೆರಿಕಾ ರಾಯಬಾರಿ ಒತ್ತಾಯ

ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಹಿರಿಯ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ಅಲೈಸ್ ವೆಲ್ಸ್, ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಸೇರಿದಂತೆ ಮತ್ತಿತರ ಸೇವೆಗಳು ಪುನರ್ ಆರಂಭಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಅಲೈಸ್ ವೆಲ್ಸ್
ಅಲೈಸ್ ವೆಲ್ಸ್

ವಾಷಿಂಗ್ಟನ್ ಡಿಸಿ:  ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಹಿರಿಯ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ಅಲೈಸ್ ವೆಲ್ಸ್, 
ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಸೇರಿದಂತೆ ಮತ್ತಿತರ ಸೇವೆಗಳು ಪುನರ್ ಆರಂಭಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ವೆಲ್ಸ್,  ಅಮೆರಿಕಾ ರಾಯಬಾರಿಗಳು ಹಾಗೂ ಇತರ ವಿದೇಶಿ ನಿಯೋಗದೊಂದಿಗೆ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಇಂಟರ್ ನೆಟ್ ಸೇವೆ ಸೇರಿದಂತೆ ಮತ್ತಿತರ ಉತ್ತಮ ಹೆಜ್ಜೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಮೆರಿಕಾ, ವಿಯೆಟ್ನಾಂ, ಬಾಂಗ್ಲಾದೇಶ, ಮಾಲ್ಡೀವ್ಸ್, ಮೊರಾಕ್ಕೊ, ಫಿಜಿ, ನಾರ್ವೆ, ಫಿಲಿಫಿನ್ಸ್,  ಅರ್ಜೆಂಟೈನಾ ಸೇರಿದಂತೆ 15 ರಾಷ್ಟ್ರಗಳ ರಾಯಬಾರಿಗಳು ಈ  ತಿಂಗಳ ಆರಂಭದಲ್ಲಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದರು.

ವಿದೇಶಿ ರಾಯಬಾರಿಗಳ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದದ್ದು ಫಲಪ್ರದವಾಗಿದೆ. ಬಂಧನಕ್ಕೊಳಗಾಗಿರುವ ಜಮ್ಮು-ಕಾಶ್ಮೀರದ ನಾಯಕರನ್ನು ಯಾವುದೇ ಪ್ರಕರಣವಿಲ್ಲದೆ ಕ್ಷಿಪ್ರವಾಗಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ವೆಲ್ಸ್,  ಸಿಎಎ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಭೇಟಿಯಿಂದ ಅವಕಾಶವಾಗಿದೆ. ರಾಜಕೀಯ ನಾಯಕರು, ಮಾಧ್ಯಮ, ನ್ಯಾಯಾಲಯ, ಬೀದಿಗಳಲ್ಲಿ ಪ್ರಜಾಪ್ರಭುತ್ವ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆ ನೀಡುವಂತೆ ಒತ್ತಿ ಹೇಳಲಾಗಿದೆ ಎಂದು ಹೇಳಿದರು.

ವ್ಯಾಪಾರ ಒಪ್ಪಂದ ಸಂಬಂಧ ಗಮನ ನೀಡುವ ನಿಟ್ಟಿನಲ್ಲಿ ಅಮೆರಿಕಾದ ನಮ್ಮ ಸಹೋದ್ಯೋಗಿಗಳು ದೆಹಲಿಯಲ್ಲಿ ಕಾರ್ಯೋನ್ಮುಖರಾಗಿರುವುದಾಗಿ ವೆಲ್ಸ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com