ನೇಪಾಳಕ್ಕೂ ತಟ್ಟಿದ ಕೊರೋನಾ ವೈರಸ್ ಭೀತಿ: ಇಂಡೋ-ನೇಪಾಳ ಗಡಿಯಲ್ಲಿ ಕಟ್ಟೆಚ್ಚರ

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ನೇಪಾಳದಲ್ಲಿಯೂ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿಯಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಠ್ಮಂಡು: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ನೇಪಾಳದಲ್ಲಿಯೂ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿಯಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ. 

ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಚೀನಾಗೆ ಭೇಟಿ ನೀಡಿದ್ದು, ಇದೀಗ ನೇಪಾಳಕ್ಕೆ ವಾಪಾಸ್ಸಾಗಿದ್ದಾರೆ. ಇದೀಗ ಈ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಬಗ್ಗೆ ನೇಪಾಳದ ಆರೋಗ್ಯ ಮತ್ತು ಜನಸಂಖ್ಯೆ ನಿರ್ವಹಣೆ ಇಲಾಖೆ ಖಚಿತ ಮಾಹಿತಿ ನೀಡಿದೆ. 

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಭಾರತ-ನೇಪಾಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿಯಲ್ಲಿ ಭದ್ರತೆ ಹೆಚ್ಚುವಂತೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಬಳಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಗಡಿಯಲ್ಲಿ ಭದ್ರತೆ ಹೆಚ್ಚುವಂತೆ ಎಲ್ಲಾ ರಾಜ್ಯಗಳ ಮುಖ್ಯಂಮತ್ರಿಗಳಿಗೂ ಹರ್ಷವರ್ಧನ್ ಅವರು ಪತ್ರ ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com