ಸಾವು ಹೀಗೂ ಬರಬಹುದು: ಘಟನೆಯ ವಿವರ ಏನು ಅಂತಂದ್ರೆ... 

ಆಸ್ಟ್ರೇಲಿಯಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕೇಕ್ ತಿನ್ನುವ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. 
ಸಾವು ಹೀಗೂ ಬರಬಹುದು: ಘಟನೆಯ ವಿವರ ಏನು ಅಂತಂದ್ರೆ...
ಸಾವು ಹೀಗೂ ಬರಬಹುದು: ಘಟನೆಯ ವಿವರ ಏನು ಅಂತಂದ್ರೆ...

ಸಿಡ್ನಿ: ಆಸ್ಟ್ರೇಲಿಯಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕೇಕ್ ತಿನ್ನುವ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. 

ಸ್ಥಳೀಯ ಮಾಧ್ಯಮದ ವರದಿಗಳ ಪ್ರಕಾರ 60 ವರ್ಷದ ಲ್ಯಾಮಿಂಗ್ ಟನ್ ನ್ನು ನುಂಗಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಈ ಘಟನೆ ವರದಿಯಾಗಿದೆ. ಲ್ಯಾಮಿಂಗ್ ಟನ್ ಆಸ್ಟ್ರೇಲಿಯಾದ ಸಾಂಪ್ರದಾಯಿಕ ಸಿಹಿ ತಿನಿಸಾಗಿದ್ದು, ಕೇಕ್ ನ್ನು ಚಾಕೊಲೇಟ್ ತುರಿದ ತೆಂಗಿನಕಾಯಿ ಜೊತೆ ತಯಾರಿಸಲಾಗಿರುತ್ತದೆ. 

ಈ ಸಿಹಿ ತಿನಿಸನ್ನು ಇಡಿಯಾಗಿ ಬಾಯಿಗೆ ಹಾಕಿಕೊಂಡ ಪರಿಣಾಮ ಮಹಿಳೆಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆ ವೇಳೆಗೆ ಆಗಲೇ ಮಹಿಳೆ ಸಾವನ್ನಪ್ಪಿದ್ದರು. ಬೀಚ್ ಹೌಸ್ ಹೊಟೆಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಮಹಿಳೆ ಭಾಗವಹಿಸಿದ್ದರು. ಸ್ಪರ್ಧೆ ಆಯೋಜಿಸಿದ್ದ ಮ್ಯಾನೇಜ್ಮೆಂಟ್ ಈ ದುರ್ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಂತಾಪ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com