ಚೀನಾದಲ್ಲಿ ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ, 2744 ಮಂದಿಯಲ್ಲಿ ವೈರಾಣು ಪತ್ತೆ

ಮಾರಣಾಂತಿಕ ಕೊರೋನಾಸ್ ಸಾಂಕ್ರಾಮಿಕ ರೋಗದಿಂದ ಚೀನಾದಲ್ಲಿ ಈವರೆಗೂ ಮೃತಪಟ್ಟವರ  ಸಂಖ್ಯೆ 80ಕ್ಕೆ ಏರಿಕೆ ಆಗಿದೆ. 2, 744 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರಾಷ್ಟ್ರೀಯ  ಆರೋಗ್ಯ ಆಯೋಗ ವರದಿ ನೀಡಿದೆ.
ಜನರನ್ನು ಪರಿಶೀಲಿಸುತ್ತಿರುವ ಚೀನಾ ಆರೋಗ್ಯ ಅಧಿಕಾರಿಗಳು
ಜನರನ್ನು ಪರಿಶೀಲಿಸುತ್ತಿರುವ ಚೀನಾ ಆರೋಗ್ಯ ಅಧಿಕಾರಿಗಳು

ಬೀಜಿಂಗ್ : ಮಾರಣಾಂತಿಕ ಕೊರೋನಾಸ್ ಸಾಂಕ್ರಾಮಿಕ ರೋಗದಿಂದ ಚೀನಾದಲ್ಲಿ ಈವರೆಗೂ ಮೃತಪಟ್ಟವರ  ಸಂಖ್ಯೆ 80ಕ್ಕೆ ಏರಿಕೆ ಆಗಿದೆ. 2, 744 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರಾಷ್ಟ್ರೀಯ  ಆರೋಗ್ಯ ಆಯೋಗ ವರದಿ ನೀಡಿದೆ.

2019-nCoV ಎಂದು ಅಧಿಕೃತವಾಗಿ ಕರೆಯಲ್ಪಡುವ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿರುವ 461 ಜನರ ಸ್ಥಿತಿ  ಗಂಭೀರವಾಗಿದೆ ಎಂದು ಆಯೋಗ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ 769 ಹೊಸ ಪ್ರಕರಣಗಳು ದೃಢಪಟ್ಟಿವೆ. 3806 ಹೊಸ ಶಂಕಿತ ಪ್ರಕರಣಗಳಾಗಿದ್ದು, ಈ ರೋಗದಿಂದ 24 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ ಎಂದು ಆಯೋಗ ಹೇಳಿದೆ.

ಭಾನುವಾರ ನ್ಯೂಮೊನಿಯಾ ಸ್ಥಿತಿಯಲ್ಲಿ 80 ಜನರು ಸಾವನ್ನಪ್ಪಿದ್ದಾರೆ.  ಈ ಮಧ್ಯೆ 51 ಜನರು ಚೇತರಿಸಿಕೊಂಡದ್ದು, 5794 ಮಂದಿಯಲ್ಲಿ ಇನ್ನೂ ಈ ಸೋಂಕಿನ ಶಂಕೆ ಇರುವುದಾಗಿ ಸರ್ಕಾರದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿಯನ್ನು ಉಲ್ಲೇಖಿಸಿ ಆಯೋಗ ತಿಳಿಸಿದೆ. 

 ಪ್ರಸ್ತುತ  30,453 ಮಂದಿಯನ್ನು ವೈದ್ಯಕೀಯ ಅಬ್ಸರ್ವೆಷನ್ ನಲ್ಲಿಡಲಾಗಿದ್ದು 583 ಮಂದಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ. ಟಿಬೆಟ್ ಹೊರತುಪಡಿಸಿ ಚೀನಾದ ಎಲ್ಲಾ ಪ್ರಾಂತ್ಯಗಳಲ್ಲೂ ಈ ವೈರಾಣು ಪ್ರಕರಣಗಳು ಕಂಡುಬಂದಿದೆ.

ಹಾಂಗ್ ಕಾಂಗ್ ನಲ್ಲಿ 8, ಮ್ಯಾಕೊದಲ್ಲಿ ಐದು ಹಾಗೂ ಥೈಲ್ಯಾಂಡ್ ನಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿವೆ. ಆಸ್ಟ್ರೇಲಿಯಾ ಹಾಗೂ ಸಿಂಗಾಪುರದಲ್ಲಿ ತಲಾ 4, ಅಮೆರಿಕಾ, ರಿಪಬ್ಲಿಕ್ ಆಪ್ ಕೊರಿಯಾ, ಜಪಾನ್, ಫ್ರಾನ್ಸ್, ಮತ್ತು ಮಲೇಷ್ಯಾದಲ್ಲಿ ತಲಾ ಮೂರು ಹಾಗೂ ವಿಯೆಟ್ನಾಂನಲ್ಲಿ 2, ನೇಪಾಳದಲ್ಲಿ ಒಬ್ಬರಲ್ಲಿ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

ಈ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ತಡೆಯಲು ಜನವರಿ 24 ಹಾಗೂ 30 ರ ನಡುವೆ ನಡೆಯಬೇಕಾಗಿದ್ದ ಬೇಸಿಗೆ ಹಬ್ಬದ ರಜೆಯನ್ನು ವಿಸ್ತರಿಸಲಾಗಿದೆ. ಕಾಲೇಜುಗಳು ಮತ್ತು ಶಾಲೆಗಳಲ್ಲಿ ವಸಂತ ಕಾಲದ ಸೆಮಿಸ್ಟರ್ ಪ್ರಾರಂಭವನ್ನು ವಿಳಂಬಗೊಳಿಸುತ್ತದೆ.

ಗುಣಪಡಿಸಿದ ರೋಗಿಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸಲಾಗುವುದು ಮತ್ತು ಚಿಕಿತ್ಸೆಯ ಕ್ರಮಗಳನ್ನು ಮತ್ತಷ್ಟು ಪರಿಷ್ಕರಿಸಲಾಗುವುದು, ವೈದ್ಯಕೀಯ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ ಎಂದು ಚೀನಾ ಅಧಿಕೃತ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com