ಕಾಬೂಲ್ ನಲ್ಲಿ ವಿಮಾನ ಪತನ, ಎಲ್ಲಾ 83 ಪ್ರಯಾಣಿಕರು ಸಾವಿನ ಶಂಕೆ

ಅಫ್ಗಾನಿಸ್ತಾನದ ದೆಹ್ಯಾಕ್ ಜಿಲ್ಲೆಯಲ್ಲಿ ಸೋಮವಾರ ವಿಮಾನವೊಂದು ಪತನಗೊಂಡಿದ್ದು, ಸುಮಾರು 83 ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಘಜ್ನಿ: ಅಫ್ಗಾನಿಸ್ತಾನದ ದೆಹ್ಯಾಕ್ ಜಿಲ್ಲೆಯಲ್ಲಿ ಸೋಮವಾರ ವಿಮಾನವೊಂದು ಪತನಗೊಂಡಿದ್ದು, ಸುಮಾರು 83 ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ಬೋಯಿಂಗ್​ ವಿಮಾನವು ಅರಿಯಾನ ಆಫ್ಘಾನ್​ ಏರ್​ಲೈನ್​ಗೆ ಸೇರಿದ್ದಾಗಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ ಘಜನಿ ಪ್ರಾಂತ್ಯದ ದೇಹ್​ ಏಕ್​ ಜಿಲ್ಲೆಯ ಸಾಡೋ ಖೇಲ್​ ಏರಿಯಾದಲ್ಲಿ ಪತನವಾಗಿದೆ ಎಂದು ಘಜನಿ ನಗರದಲ್ಲಿರುವ ಪ್ರಾಂತೀಯ ಗವರ್ನರ್​ ಕಚೇರಿಯ ವಕ್ತಾರ ಆರೀಫ್​ ನೂರಿ ಹೇಳಿದ್ದಾರೆ.

ಘಜ್ನಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಹೇರತ್ ನಿಂದ ಕಾಬೂಲ್ ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಏಕಾಏಕಿ ಪತನಗೊಂಡಿದೆ. ಈ ಅವಘಡಕ್ಕೆ ಸೂಕ್ತ ಕಾರಣ ಇನ್ನೂ ತಿಳಿದುಬಂದಿಲ್ಲ.

ವಿಮಾನದಲ್ಲಿ ಒಟ್ಟು 83 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಈವರೆಗೂ ಯಾವುದೇ ಸಾವು-ನೋವುಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ವಿಮಾನವು ತಾಲಿಬಾನ್​ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com