ಎದೆನೋವು  ಹಿನ್ನೆಲೆ: ನೇಪಾಳ ಪ್ರಧಾನಿ ಆಸ್ಪತ್ರೆಗೆ ದಾಖಲು 

ಎದೆನೋವು ಕಾಣಿಸಿಕೊಂಡ ಪರಿಣಾಮ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ

ಕಠ್ಮಂಡು: ಎದೆನೋವು ಕಾಣಿಸಿಕೊಂಡ ಪರಿಣಾಮ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಒಲಿ ಕಠ್ಮಂಡುವಿನ ಸಾಹಿದ್ ಗಂಗಲಾಲ್ ರಾಷ್ಟ್ರೀಯ ಹೃದಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಪ್ರಧಾನಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ನಿಯಮಿತ ಆರೋಗ್ಯ ತಪಾಸಣೆಯ ಒಂದು ಭಾಗವಾಗಿದೆ ಎಂದು ಪ್ರಧಾನಿ  ಪತ್ರಿಕಾ ಸಲಹೆಗಾರ ಸೂರ್ಯ ಥಾಪಾ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಿಗ್ಗೆ ಪ್ರಧಾನಿ ಸಚಿವ ಸಂಪುಟ ಸಭೆ ಕರೆದುದ್ದು ಈ ವೇಳೆ ನೇಪಾಳ್ ಕಮ್ಯುನಿಟಿ ಪಾರ್ಟಿ ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಅಲ್ಲದೆ ನಿನ್ನೆ ಪ್ರಧಾನಿ ನಿವಾಸದಲ್ಲಿ ನಡೆದಿದ್ದ ಆಡಳಿತ ಪಕ್ಷದ ಸ್ಥಾಯಿ ಸಮಿತಿ ಸಭೆಯಲ್ಲಿ ನೇಪಾಳ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಒಲಿ ಅವರ ಭಾರತದ ಕುರಿತಾದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com