ತನ್ನ ಆ್ಯಪ್‌ಗಳ ಮೇಲೆ ನಿಷೇಧ ಭಾರತದ  'ತಾರತಮ್ಯ ಧೋರಣೆ'ಗೆ ಸಾಕ್ಷಿ: ಚೀನಾ ಆರೋಪ

ಭಾರತವು ಚೀನಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದು ಅದರ  "ತಾರತಮ್ಯ" ಧೋರಣೆಯಾಗಿದೆ ಎಂದು ಚೀನಾ ಹೇಳಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ "ಧಕ್ಕೆ" ಯಾಗುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಕೆಲ ದಿನಗಳ ನಂತರ ಚೀನಾ ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿದೆ. 
ತನ್ನ ಆ್ಯಪ್‌ಗಳ ಮೇಲೆ ನಿಷೇಧ ಭಾರತದ  'ತಾರತಮ್ಯ ಧೋರಣೆ'ಗೆ ಸಾಕ್ಷಿ: ಚೀನಾ ಆರೋಪ

ಬೀಜಿಂಗ್: ಭಾರತವು ಚೀನಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದು ಅದರ  "ತಾರತಮ್ಯ" ಧೋರಣೆಯಾಗಿದೆ ಎಂದು ಚೀನಾ ಹೇಳಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ "ಧಕ್ಕೆ" ಯಾಗುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಕೆಲ ದಿನಗಳ ನಂತರ ಚೀನಾ ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿದೆ. 

"ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಭಾರತದ ರಕ್ಷಣೆ, ರಾಷ್ಟ್ರದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ" ಯ ಹಾನಿಗೆ ಯತ್ನಿಸಿದ್ದಕ್ಕಾಗಿ ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್‌ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ಸೋಮವಾರ ನಿಷೇಧಿಸಿದೆ. ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನ್ಯದೊಂದಿಗೆ ಗಡಿಯಲ್ಲಿ ನಡೆದ ಸಂಘ್ರಷದ ಬಳಿಕ ಈ ನಿಷೇಧ ಜಾರಿಯಾಗಿದೆ."

"ಮೊದಲನೆಯದಾಗಿ, ಭಾರತೀಯ ಉತ್ಪನ್ನಗಳು ಮತ್ತು ಸೇವೆಗಳ ವಿರುದ್ಧ ಚೀನಾ ಯಾವುದೇ ನಿರ್ಬಂಧಿತ ಮತ್ತು ತಾರತಮ್ಯದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ" ಚೀನಾ ಹೇಳಿದೆ. 

"ಭಾರತದ ಈ ನಿರ್ಧಾರ ಸಂಬಂಧಿತ ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತದೆ" ಎಂದು ನೆರೆರಾಷ್ಟ್ರ ತನ್ನ ಹೇಳಿಕೆಯಲ್ಲಿ ವಿವರಿಸಿದೆ. ಮಾತ್ರವಲ್ಲದೆ "ಚೀನಾ ಮತ್ತು ಚೀನಾದ ಉದ್ಯಮಗಳ ವಿರುದ್ಧದ ತಾರತಮ್ಯವನ್ನು ಭಾರತ ತಕ್ಷಣ ನಿಲ್ಲಿಸಲಿದೆ ಎಂದು ತಾನು ಭರವಸೆ ಹೊಂದಿದ್ದೇನೆ" ಎಂದು ಸಹ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com