ಡೊನಾಲ್ಡ್‌ ಟ್ರಂಪ್ ಹಿರಿಯ ಮಗನ ಗರ್ಲ್‌ಫ್ರೆಂಡ್‌ಗೆ ಕೊರೋನಾ ಪಾಸಿಟಿವ್!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿಗೂ ಕೊರೊನಾವೈರಸ್ ಪಾಸಿಟಿವ್ ದೃಢವಾಗಿದೆ ಎಂದು ಅಮೆರಿಕಾ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

Published: 04th July 2020 12:34 PM  |   Last Updated: 04th July 2020 12:45 PM   |  A+A-


Kimberly Guilfoyle and President Donald Trump's oldest son.

ಕಿಂಬರ್ಲಿ ಗುಲ್ಫೋಯ್ಲ್

Posted By : Shilpa D
Source : PTI

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿಗೂ ಕೊರೊನಾವೈರಸ್ ಪಾಸಿಟಿವ್ ದೃಢವಾಗಿದೆ ಎಂದು ಅಮೆರಿಕಾ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

ಅಧ್ಯಕ್ಷ ಟ್ರಂಪ್‌ ಅವರ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಜೊತೆ ಡೇಟಿಂಗ್ ಮಾಡುತ್ತಿರುವ  ಕಿಂಬರ್ಲಿ ಗಿಲ್ಫಾಯ್ಲ್, ಅಮೆರಿಕಾ  ಅಧ್ಯಕ್ಷರ  ಭಾಷಣ ಮತ್ತು ಮೌಂಟ್ ರಶ್ಮೋರ್ನ್‌ನಲ್ಲಿ ಸಂಭ್ರಮಾಚರಣೆ ನೋಡಲು ದಕ್ಷಿಣ ಡಕೋಟಾಗೆ ಪ್ರಯಾಣಿಸಿದ್ದರು.

ಆಕೆಗೆ ಯಾವುದೇ ರೋಗ ಲಕ್ಷಣಗಳಿರಲಿಲ್ಲ, ಪರೀಕ್ಷೆ ನಡೆಸಿದ ಸಮಯದಲ್ಲಿ ಆಕೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಟ್ರಂಪ್ ಅಭಿಯಾನದ ಹಣಕಾಸು ಸಮಿತಿಯ ಮುಖ್ಯಸ್ಥ ಸೆರ್ಗಿಯೋ ಗೋರ್ ಹೇಳಿದ್ದಾರೆ.

ಮುನ್ನೆಚ್ಚರಿಕೆಯಾಗಿ  ಮುಂಬರುವ ಎಲ್ಲಾ ಸಮಾರಂಭಗಳಲ್ಲಿ ಭಾಗಿಯಾವುದನ್ನು ರದ್ದುಗೊಳಿಸಲಾಗಿದೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಪರೀಕ್ಷಿಸಲಾಗಿದ್ದು, ನೆಗೆಟಿವ್ ವರದಿಯಾಗಿದೆ. 
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp