ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್ ಅಧನೋಮ್
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್ ಅಧನೋಮ್

ಇನ್ನೆರಡು ವಾರದಲ್ಲಿ ಕೋವಿಡ್-19 ಲಸಿಕೆಯ ಪ್ರಯೋಗದ ಫಲಿತಾಂಶ ಲಭ್ಯ: ವಿಶ್ವ ಆರೋಗ್ಯ ಸಂಸ್ಥೆ

ಇನ್ನೆರಡು ವಾರದಲ್ಲಿ ಮಾರಕ ಕೊರೋನಾ ವೈರಸ್ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶಗಳು ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆ: ಇನ್ನೆರಡು ವಾರದಲ್ಲಿ ಮಾರಕ ಕೊರೋನಾ ವೈರಸ್ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶಗಳು ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್ ಅಧನೋಮ್ ಅವರು, ವಿಶ್ವದ 39 ದೇಶಗಳ ವಿಜ್ಞಾನಿಗಳು ತಯಾರಿಸಿರುವ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶ ಇನ್ನೆರಡು ವಾರದಲ್ಲಿ ಲಭ್ಯವಾಗಲಿದೆ. ಈ ಪರೀಕ್ಷೆಗಾಗಿ ಜಗತ್ತಿನಾದ್ಯಂತ ಐದು ಸಾವಿರಕ್ಕೂ ಅಧಿಕ ಕೋವಿಡ್-19 ಸೋಂಕಿತರನ್ನು ಬಳಸಿಕೊಳ್ಳಲಾಗಿದ್ದು, ಅವರ ಮೇಲೆ ಈ ಲಸಿಕೆಗಳ ಪ್ರಯೋಗ ಮಾಡಲಾಗಿದೆ. ಈ ಪ್ರಯೋಗದ ಫಲಿತಾಂಶ ಇನ್ನೆರಡು ವಾರದಲ್ಲಿ ಲಭ್ಯವಾಗಲಿದೆ. 

ಮೂಲಗಳ ಪ್ರಕಾರ 39 ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ವಿವಿಧ ರೀತಿಯ ಲಸಿಕೆಗಳ ಪ್ರಯೋಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಈ ಲಸಿಕೆಯ ಪ್ರಯೋಗ ಈಗಾಗಲೇ ಸೋಂಕಿತರ ಮೇಲೆ ನಡೆದಿದೆ ಎನ್ನಲಾಗಿದೆ. ಇದರ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಚಿಕಿತ್ಸೆಗೆ ರೆಮ್ಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಲೋಪಿನಾವಿರ್ / ರಿಟೊನವಿರ್ ಬಳಕೆ ಸೂಚಿಸಿತ್ತು. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಪ್ರಯೋಜನವಿಲ್ಲ ಎಂದು ಹೇಳಿ ಬಹುತೇಕ ದೇಶಗಳು ಈ ಔಷಧಿಯ ಬಳಕೆ ಮತ್ತು ಪ್ರಯೋಗ ಕೈ ಬಿಟ್ಟಿವೆ. ಅಮೆರಿಕದ ರೆಮ್ಡೆಸಿವಿರ್ ಲಸಿಕೆ ಮೇಲೆ ಒಂದಷ್ಟು ಪ್ರಯೋಗ ನಡೆಯುತ್ತಿದೆ. ಇತ್ತ ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ತಮ ಫಲಿತಾಂಶ ನೀಡಿದ್ದು, ಇದರ ಬಳಕೆಗೆ ಐಸಿಎಂಆರ್ ನಿರ್ದೇಶನ ನೀಡುವ ಸಾಧ್ಯತೆ ಇದೆ.

Related Stories

No stories found.

Advertisement

X
Kannada Prabha
www.kannadaprabha.com