ಕೋವಿಡ್-19 ವೈರಸ್ ತನಿಖೆ: ಮುಂದಿನವಾರ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ನಿಯೋಗ ಭೇಟಿ

ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಚೀನಾ ದೇಶವೇ ಹೊಣೆ ಎಂಬ ಆರೋಪ ಜಾಗತಿಕ ಸಮುದಾಯದಿಂದ ಬಲವಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಈ ಕುರಿತಂತೆ ಮುಂದಿನ ವಾರ ತನ್ನ ಒಂದು ನಿಯೋಗವನ್ನು ಚೀನಾಗೆ ಕಳುಹಿಸಲಿದೆ.
ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಚೀನಾ ದೇಶವೇ ಹೊಣೆ ಎಂಬ ಆರೋಪ ಜಾಗತಿಕ ಸಮುದಾಯದಿಂದ ಬಲವಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಈ ಕುರಿತಂತೆ ಮುಂದಿನ ವಾರ ತನ್ನ ಒಂದು ನಿಯೋಗವನ್ನು ಚೀನಾಗೆ ಕಳುಹಿಸಲಿದೆ.

ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನಾ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಟ್ಟಿತು. ಅಥವಾ ಮಾಹಿತಿ ನೀಡುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಿತು ಎಂಬ ಆರೋಪವನ್ನು ಕೇಳಿಬಂದಿತ್ತು. ಪ್ರಮುಖವಾಗಿ ಚೀನಾ ವಿರುದ್ಧ ಕಿಡಿಕಾರಿದ್ದ ಅಮೆರಿಕ ದೇಶ, ಚೀನಾ ಉದ್ದೇಶಪೂರ್ವಕವಾಗಿಯೇ ಜಗತ್ತಿನ ಮೇಲೆ ಬಯೋ ವಾರ್ ಸಾರಿದ್ದು, ಕೊರೋನಾ ವೈರಸ್ ಚೀನಾ ಲ್ಯಾಬ್ ನಲ್ಲಿ ತಯಾರಾದ ಜೈವಿಕ ಅಸ್ತ್ರ ಎಂದು ಕಿಡಿಕಾರಿತ್ತು. ಇದೇ ಕಾರಣಕ್ಕೆ ಕೊರೋನಾ ವೈರಸ್ ಅನ್ನು ಅಮೆರಿಕ ಚೀನಾ ವೈರಸ್ ಎಂದು ಕಿಡಿಕಾರಿತ್ತು.

ಅಲ್ಲದೆ ಇತ್ತೀಚೆಗಷ್ಟೇ ಭಾರತವೂ ಸೇರಿದಂತೆ ಜಗತ್ತಿನ 169 ರಾಷ್ಟ್ರಗಳು ಕೊರೋನಾ ವೈರಸ್ ಮೂಲದ ಕುರಿತು ತನಿಖೆ ನಡೆಸುವಂತೆ ಸಹಿ ಹಾಕಿದ್ದವು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ತನಿಖೆ ನಡೆಸುತ್ತಿದ್ದು, ವಿಶ್ವ ಸಂಸ್ಥೆಯ ವಿಶೇಷ ನಿಯೋಗ ತನಿಖೆಗೆ ಮುಂದಾಗಿದೆ. ಚೀನಾದಲ್ಲಿ ವೈರಸ್ ಮೂಲ ಹುಡುಕುವ ಕಾರ್ಯವನ್ನು ಈ ನಿಯೋಗ ಮಾಡಲಿದ್ದು, ಮುಂದಿನವಾರ ಚೀನಾಗೆ ತೆರಳಲಿದೆ. 

ಈ ಬಗ್ಗೆ ವಿಶ್ವಸಂಸ್ಥೆಯ ಹಿರಿಯ ವಿಜ್ಞಾನಿ ಭಾರತ ಮೂಲದ ಡಾ.ಸೌಮ್ಯ ಸ್ವಾಮಿನಾಥನ್ ಅವರು, ಚೀನಾದಲ್ಲಿ ಮೊದಲಿಗೆ ವೈರಸ್ ಕಂಡು ಬಂದ ಜಾಗದಲ್ಲಿ ಸುಧೀರ್ಘ ಅಧ್ಯಯನ ನಡೆಸಲಾಗುತ್ತದೆ. ತಮ್ಮ ಭೇಟಿ ಕುರಿತು ತಾವು ಚೀನಾ ಸರ್ಕಾರದೊಂದಿಗೆ ಮಾತನಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಒಂದು ತಂಡ ಚೀನಾಗೆ ತೆರಳಲಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹೇಗೆ ಕೊರೋನಾ ವೈರಸ್ ಹಬ್ಬಿತು? ವೈರಸ್ ಮೂಲ ಯಾವುದು? ವೈರಸ್ ಕುರಿತಂತೆ ಚೀನಾ ಸರ್ಕಾರ ಮತ್ತು ಅಲ್ಲಿನ ಆರೋಗ್ಯ ಇಲಾಖೆ ಜಗತ್ತಿಗೆ ಪಾರದರ್ಶಕ ಮಾಹಿತಿ ನೀಡಿತೇ? ಎಂಬಿತ್ಯಾದಿ ಅಂಶಗಳನ್ನು ಈ ನಿಯೋಗ ತನಿಖೆ ಮಾಡಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com