ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದ ಕಿಮ್ ಕರ್ದಾಶಿಯನ್ ಪತಿ ಕ್ಯಾನೆ!

ರೂಪದರ್ಶಿ ಕಿಮ್ ಕರ್ದಾಶಿಯನ್ ಅವರ ಪತಿ  ಕ್ಯಾನೆ ವೆಸ್ಟ್ ಅವರು ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಿಮ್ ಕರ್ದಾಶಿಯನ್-ಕ್ಯಾನೆ ವೆಸ್ಟ್
ಕಿಮ್ ಕರ್ದಾಶಿಯನ್-ಕ್ಯಾನೆ ವೆಸ್ಟ್

ವಾಷಿಂಗ್ಟನ್: ರೂಪದರ್ಶಿ ಕಿಮ್ ಕರ್ದಾಶಿಯನ್ ಅವರ ಪತಿ  ಕ್ಯಾನೆ ವೆಸ್ಟ್ ಅವರು ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. 

ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಗೆ ಎದುರಾಳಿಯಾಗಿ ಖ್ಯಾತ ಹಿಪ್ ಹಾಪ್ ಗಾಯಕ ಕ್ಯಾನೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ನವೆಂಬರ್ 3ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. 

ಅಮೆರಿಕಾದ 244ನೇ ಸ್ವಾತಂತ್ರ್ಯೋತ್ಸವದ ದಿನವಾದ ಜುಲೈ 4ರಂದು ಟ್ವೀಟ್ ಮಾಡಿ ಕ್ಯಾನೆ ವೆಸ್ಟ್ ತಿಳಿಸಿದ್ದಾರೆ. 

ಇನ್ನು ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಕ್ಯಾನೆ ಇದೀಗ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವುದು ಗಮನ ಸೆಳೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com