ಚೀನಾ ಸಂಘರ್ಷಕ್ಕಿಳಿದರೆ ಭಾರತಕ್ಕೆ ಅಮೆರಿಕಾ ಸೇನೆ ಜೊತೆಯಾಗುತ್ತೆ: ಮಾರ್ಕ್ ಮಿಡೋವ್ಸ್

ಚೀನಾ ಭಾರತದ ಮೇಲೆ ದಂಡೆತ್ತಿ ಬಂದರೆ ಅಮೆರಿಕಾ ಸೇನೆ ಭಾರತದ ಪರವಾಗಿ ನಿಲ್ಲಲಿದೆ ಎಂದು ಶ್ವೇತಭವನದ ಚೀಫ್ ಆಫ್ ಸ್ಟಾಫ್ ಮಾರ್ಕ್ ಮಿಡೋವ್ಸ್ ಹೇಳಿದ್ದಾರೆ. 
ಟ್ರಂಪ್-ಮಾರ್ಕ್ ಮಿಡೋವ್ಸ್
ಟ್ರಂಪ್-ಮಾರ್ಕ್ ಮಿಡೋವ್ಸ್

ವಾಷಿಂಗ್ಟನ್: ಚೀನಾ ಭಾರತದ ಮೇಲೆ ದಂಡೆತ್ತಿ ಬಂದರೆ ಅಮೆರಿಕಾ ಸೇನೆ ಭಾರತದ ಪರವಾಗಿ ನಿಲ್ಲಲಿದೆ ಎಂದು ಶ್ವೇತಭವನದ ಚೀಫ್ ಆಫ್ ಸ್ಟಾಫ್ ಮಾರ್ಕ್ ಮಿಡೋವ್ಸ್ ಹೇಳಿದ್ದಾರೆ. 

ಅಮೆರಿಕಾ ನೌಕಾಪಡೆಯ ಎರಡು ಯುದ್ಧನೌಕೆಗಳನ್ನು ದಕ್ಷಿಣ ಚೀನಾ ಸಮುದ್ರದಲ್ಲಿ ನಿಯೋಜನೆ ಮಾಡಿದ ಬೆನ್ನಲ್ಲೇ ಮಾರ್ಕ್ ಅವರು ಈ ಹೇಳಿಕೆ ನೀಡಿದ್ದಾರೆ. 

ನಮ್ಮ ನಿರ್ಧಾರ, ಸಂದೇಶ ಸ್ಪಷ್ಟ. ದಕ್ಷಿಣ ಚೀನಾ ಸಮುದ್ರ ಇಲ್ಲವೇ ಇತರ ಪ್ರದೇಶಗಳ ಮೇಲೆ ಚೀನಾ ಅಥವಾ ಯಾವುದೇ ದೇಶವಾಗಲಿ ತಮ್ಮ ಪ್ರಾಬಲ್ಯ ಪ್ರದರ್ಶಿಸಲು ಮುಂದಾದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಮಾರ್ಕ್ ಹೇಳಿದ್ದಾರೆ. 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಸಂಬಂಧಿಸಿದ ಹಲವು ಮಹತ್ವದ ಆದೇಶಗಳಿಗೆ ಅಂಕಿತ ಹಾಕಲಿದ್ದಾರೆ ಎಂಬ ಸುಳಿವನ್ನು ಮಾರ್ಕ್ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com