ಕೋವಿಡ್ ಪ್ರಾಣಿ ಮೂಲವನ್ನು ಪತ್ತೆ ಮಾಡಲು ಚೀನಾಗೆ ತೆರಳಲಿರುವ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಜ್ಞರು ಈ ವಾರದ ಅಂತ್ಯಕ್ಕೆ ಚೀನಾಕ್ಕೆ ಪ್ರಯಾಣಿಸಲಿದ್ದು, ಕೋವಿಡ್ -19ನ ಪ್ರಾಣಿ ಮೂಲಗಳನ್ನು ಪತ್ತೆ ಮಾಡುವ ಕೆಲಸವನ್ನು ಪ್ರಾರಂಭಿಸಲಿದ್ದಾರೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗಳವಾರ ಪ್ರಕಟಿಸಿದ್ದಾರೆ.
ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಜ್ಞರು ಈ ವಾರದ ಅಂತ್ಯಕ್ಕೆ ಚೀನಾಕ್ಕೆ ಪ್ರಯಾಣಿಸಲಿದ್ದು, ಕೋವಿಡ್ -19ನ ಪ್ರಾಣಿ ಮೂಲಗಳನ್ನು ಪತ್ತೆ ಮಾಡುವ ಕೆಲಸವನ್ನು ಪ್ರಾರಂಭಿಸಲಿದ್ದಾರೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗಳವಾರ ಪ್ರಕಟಿಸಿದ್ದಾರೆ.

ತಜ್ಞರ ಈ ವಾರದ ಪ್ರವಾಸವು ಕೊವಿಡ್-19 ನ ಪ್ರಾಣಿ ಮೂಲಗಳನ್ನು ಪತ್ತೆಮಾಡುವ ಗುರಿಯನ್ನು ಹೊಂದಿದೆ. ಈ ರೋಗವು ಪ್ರಾಣಿಗಳಿಂದ ಮನುಷ್ಯರಿಗೆ ಹೇಗೆ ಹರಡುತ್ತದೆ ಎಂಬುದರ ಕುರಿತು ತಿಳಿಯಲು ಇದು ದಾರಿ ಮಾಡಿಕೊಡುತ್ತದೆ ಎಂದು ಟೆಡ್ರೋಸ್‍ ಆನ್‍ಲೈನ್‍ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವುದಾಗಿ ಸ್ಪುಟ್ನಿಕ್‍ ಸುದ್ದಿಸಂಸ್ಥೆ ವರದಿ ಮಾಡಿದೆ.  

‘ತಜ್ಞರ ಚೀನಾ ಪ್ರವಾಸಕ್ಕೆ ಎಲ್ಲಾ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ. ಕೊವಿಡ್‍ ರೋಗದ ಮೂಲಗಳನ್ನು ಪತ್ತೆ ಮಾಡಲು ತಮ್ಮ ಚೀನಾದ ಸಹವರ್ತಿಗಳೊಂದಿಗೆ ವೈಜ್ಞಾನಿಕ ಯೋಜನೆಗಳನ್ನು ತಯಾರಿಸಲು  ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಈ ವಾರ ಚೀನಾಕ್ಕೆ ಪ್ರಯಾಣಿಸಲಿದ್ದಾರೆ. ಪ್ರಾಣಿಗಳು ಮತ್ತು ಮನುಷ್ಯರ ನಡುವೆ ವೈರಸ್ ಹೇಗೆ ಹರಡಿತು ಎಂಬುದನ್ನು ಕಂಡುಹಿಡಿಯುವುದು ಕಾರ್ಯಕ್ರಮದ ಉದ್ದೇಶವಾಗಿದೆ ‘ ಎಂದು ಟೆಡ್ರೋಸ್‍ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com