ಗಡಿಯಲ್ಲಿ ಸೇನೆ ಹಿಂತೆಗೆತ, ಚೀನಾ-ಭಾರತದಿಂದ ಪರಿಣಾಮಕಾರಿ ಕ್ರಮ: ಚೀನಾ ವಕ್ತಾರ

ವಾಸ್ತವ ಗಡಿ ರೇಖೆಯಿಂದ(ಎಲ್ಎಸಿ) ಸೇನೆ ಹಿಂತೆಗೆತ ಸಂಬಂಧ ಭಾರತ ಮತ್ತು ಚೀನಾ ಭದ್ರತಾ ಪಡೆಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದಾರೆ. 
ಝಾವೊ ಲಿಜಿಯಾನ್
ಝಾವೊ ಲಿಜಿಯಾನ್

ಬೀಜಿಂಗ್: ವಾಸ್ತವ ಗಡಿ ರೇಖೆಯಿಂದ(ಎಲ್ಎಸಿ) ಸೇನೆ ಹಿಂತೆಗೆತ ಸಂಬಂಧ ಭಾರತ ಮತ್ತು ಚೀನಾ ಭದ್ರತಾ ಪಡೆಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದಾರೆ. 

ಗಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೇನೆಯನ್ನು ಚೀನಾ ಸೈನಿಕರು ಹತ್ಯೆಗೈದಿದ್ದರು. ಇದಾದ ನಂತರ ಉಭಯ ದೇಶಗಳ ನಡುವೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದಾದ ನಂತರ ಉಭಯ ದೇಶಗಳ ನಡುವೆ ಸೇನಾಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿತ್ತು. 

ಮಾತುಕತೆ ವೇಳೆ ಉಭಯ ದೇಶದ ಭದ್ರತಾಪಡೆಗಳು ಎಲ್ಎಸಿಯಿಂದ ತ್ವರಿತವಾಗಿ ಹಿಂದೆ ಸರಿಯಲು ಸಮ್ಮತಿಸಿತ್ತು. ಅಂತೆ ಚೀನಾ ಸೇನೆ 1ರಿಂದ 2ಕಿ.ಮೀ ಹಿಂದಕ್ಕೆ ಸರಿದಿತ್ತು. ಇದಾದ ನಂತರ ಪೂರ್ವ ಲಡಾಖ್ ಗಡಿಯಲ್ಲಿ ಉದ್ಭವಿಸಿದ್ದ ಪ್ರಕ್ಷುಬ್ಧ ವಾತಾವರಣ ತಿಳಿಯಾಗುತ್ತಿದೆ. 

ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯಕ್ಕೆ ಕಳೆದ 2 ದಿನಗಳ ಹಿಂದೆಯೇ ಚೀನಾ ಸೇನೆ ಚಾಲನೆ ನೀಡಿತ್ತು. ಇಂದು ಆ ಕಾರ್ಯ ಪೂರ್ಣಗೊಂಡಿದೆ. ವಿವಾದಿತ ಸ್ಥಳದಲ್ಲಿ ಚೀನಾ ಸೈನಿಕರು ನಿರ್ಮಿಸಿದ್ದ ಸಂಪೂರ್ಣ ಟೆಂಟ್ ಗಳನ್ನು ತೆರವು ಗೊಳಿಸಿದ್ದು ಮಾತ್ರವಲ್ಲದೇ ಎಲ್ಲ ಸೈನಿಕರೂ ಪ್ಯಾಟ್ರಲಿಂಗ್ ಪಾಯಿಂಟ್ 2 ಕಿ.ಮೀ ಹಿಂದಕ್ಕೆ ಹೋಗಿದ್ದಾರೆ. ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪ್ರದೇಶಗಳಿಂದ ಉಭಯ ಸೈನಿಕರೂ ಸಂಪೂರ್ಣವಾಗಿ ತಮ್ಮ ತಮ್ಮ ಟೆಂಟ್ ಗಳನ್ನು ಖಾಲಿ ಮಾಡಿ ಹಿಂದಕ್ಕೆ ಸರಿದಿದ್ದಾರೆ.

ಕಳೆದ ಭಾನುವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ವಿಡಿಯೊ ಕಾಲಿಂಗ್ ಮೂಲಕ ಮಾತುಕತೆ ನಡೆಸಿದ್ದರು. 

ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪೂರ್ಣವಾಗಿ ಶಾಂತಿ ಸ್ಥಾಪಿಸುವ ವಿಚಾರ ಮತ್ತು ಗಲ್ವಾನ್ ಕಣಿವೆ ಸಂಘರ್ಷದಂತಹ ಘಟನೆಗಳು ಮರುಕಳಿಸದಂತೆ ಭಾರತ–ಚೀನಾ ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ. ಗಡಿ ಉದ್ವಿಗ್ನತೆ ಶಮನಕ್ಕೆ ಚೀನಾ ತನ್ನ ಸೈನ್ಯವನ್ನು ಹಿಂಪಡೆಯುವುದೊಂದೇ ದಾರಿ. ಗಡಿ ತಕರಾರು ಸಂಬಂಧ ಪರಸ್ಪರ ಆದ ಒಪ್ಪಂದಗಳಿಗೆ ಧಕ್ಕೆ ತರಬಾರದು ಎಂದು ಧೋವಲ್ ಹೇಳಿದ್ದರು.  ಅಂತೆಯೇ ಶಾಂತಿ ಮಾತುಕತೆಗಳಿಗೂ ಮುನ್ನ ಗಡಿಯಿಂದ ಸೈನ್ಯ ಹಿಂಪಡೆಯುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಧೋವಲ್ ಹೇಳಿದ್ದರು.

ಧೋವಲ್ ಮಾತಿಗೆ ಧ್ವನಿಗೂಡಿಸಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ, ಗಲ್ವಾನ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಈ ಮಾತುಕತೆ ಬೆನ್ನಲ್ಲೇ ಗಲ್ವಾನ್‌ ಕಣಿವೆಯ ಕೆಲವು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಚೀನಾದ ಸೈನಿಕರು ಟೆಂಟ್‌ಗಳನ್ನು ತೆರವು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com