ರಷ್ಯಾದಲ್ಲಿ ವಿಶ್ವದ ಮೊದಲ ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗ ಯಶಸ್ವಿ!

ಮಾಸ್ಕೋ ವೈದ್ಯಕೀಯ ವಿಶ್ವವಿದ್ಯಾಲಯ ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಟ್ರಾನ್ಸ್ಲೇಷನಲ್ ಮೆಡಿಸಿನ್ ಅಂಡ್ ಬಯೋ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಮಾಸ್ಕೋ ವೈದ್ಯಕೀಯ ವಿಶ್ವವಿದ್ಯಾಲಯ ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಟ್ರಾನ್ಸ್ಲೇಷನಲ್ ಮೆಡಿಸಿನ್ ಅಂಡ್ ಬಯೋ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ. 

ಮಾನವರ ಮೇಲೆ ಕೊರೋನಾಗೆ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಮೊದಲ ದೇಶ ರಷ್ಯಾವಾಗಿದೆ. ಸಂಶೋಧನೆಯ ಫಲಿತಾಂಶಗಳು ಔಷಧಿಗಳ ಪರಿಣಾಮವನ್ನು ಸಾಬೀತುಪಡಿಸಿವೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. 

ಲಸಿಕೆಗಾಗಿ ಮಾನವ ಪ್ರಯೋಗಗಳು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಂಡಿವೆ ಮತ್ತು ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸೆಕೆನೋವ್ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕಿ ಎಲೆನಾ ಸ್ಮೊಲ್ಯಾರ್ಚುಕ್ ಅವರು ಹೇಳಿದ್ದಾರೆ. 

ಜುಲೈ 15 ಮತ್ತು ಜುಲೈ 20ರಂದು ಸ್ವಯಂಸೇವಕರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಮೋಲಿಯಾರ್ಚುಕ್ ಹೇಳಿದ್ದಾರೆ. 

ಲಸಿಕೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲಸಿಕೆಗಳ ಸುರಕ್ಷತೆಗೆ ಅನುಗಣವಾಗಿದೆ ಎಂದು ಸೆಚೆನೊವ್ ವಿಶ್ವವಿದ್ಯಾಲಯದ ಮೆಡಿಕಲ್ ಪ್ಯಾರಸಿಟಾಲಜಿ, ಟ್ರೋಫಿಕಲ್ ಅಂಡ್ ವೆಕ್ಟರ್ ಬೋರ್ನ್ ಡಿಸೀಸ್ ವಿಭಾಗದ ನಿರ್ದೇಶಕ ಅಲೆಕ್ಸಾಂಡರ್ ಲುಕಾಶೆವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com