130 ಮಿಲಿಯನ್ ಮಂದಿಯನ್ನು ಹಸಿವಿಗೆ ದೂಡಿದ ಕೊರೋನಾ ವೈರಸ್: ವಿಶ್ವಸಂಸ್ಥೆ

ಜಗತ್ತಿನ 210 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಜಗತ್ತಿನಾದ್ಯಂತ 130 ಮಿಲಿಯನ್ ಮಂದಿಯನ್ನು ಹಸಿವಿಗೆ ದೂಡಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಜಗತ್ತಿನ 210 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಜಗತ್ತಿನಾದ್ಯಂತ 130 ಮಿಲಿಯನ್ ಮಂದಿಯನ್ನು ಹಸಿವಿಗೆ ದೂಡಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ ಕಳೆದ ವರ್ಷ 10 ಮಿಲಿಯನ್ ಮಂದಿ ಹಸಿವಿನಿಂದ ಬಳಲಿದ್ದರು. ಆಗರೆ ಈ ವರ್ಷ ಕೊರೋನಾ ವೈರಸ್ ನಿಂದಾಗಿ ಜಗತ್ತಿನಾದ್ಯಂತ 130 ಮಿಲಿಯನ್ ಮಂದಿ ಹಸಿವಿನಿಂದ ಬಳಲುವಂತಾಗುತ್ತದೆ.  

ಕೊರೋನಾ ವೈರಸ್ ನಿಂದಾಗಿ ಜಗತ್ತಿನಾದ್ಯಂತ ಕೈಗಾರಿಕಾ ಚಟುವಟಿಕೆ ಸ್ಥಬ್ದವಾಗಿದ್ದು, ಉದ್ಯಮ ವಲಯ ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದೆ. ಜಗತ್ತಿನ ಎಲ್ಲ ವಲಯಗಳೂ ತಮ್ಮ ತಮ್ಮ ಅಸ್ಥಿತ್ವ ಕಾಯ್ದುಕೊಳ್ಳಲು ತಿಣುಕಾಡುತ್ತಿದೆ. ಕೋಟ್ಯಂತರ ಉದ್ಯೋಗ ನಷ್ಟವಾಗಿದ್ದು, ಕೊರೋನಾ ವೈರಸ್ ನಿಂದಾಗಿ ಜಗತ್ತಿನಾದ್ಯಂತ ಸುಮಾರು 130 ಮಿಲಿಯನ್ ಮಂದಿ ಹಸಿವಿನಿಂದ ಬಳಲಲಿದ್ದಾರೆ. 2014ರಿಂದಲೇ ಜಾಗತಿಕವಾಗಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತಾದರೂ, 2020ರಲ್ಲಿ ಈ ಪ್ರಮಾಣದಲ್ಲಿ ಶೇ.70ರಷ್ಟು ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com