ಕೊರೋನಾ ವೈರಸ್: ಜಾಗತಿಕ ಸೋಂಕಿತರ ಸಂಖ್ಯೆ 1 ಕೋಟಿ 31 ಲಕ್ಷ, 5.73 ಲಕ್ಷ ಮಂದಿ ಸಾವು

ಜಗತ್ತಿನಾದ್ಯಂತ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದ್ದು, ಭಾನುವಾರ ಸಂಜೆ ವೇಳೆಗೆ ಜಾಗತಿಕ ಸೋಂಕಿತರ ಸಂಖ್ಯೆ 1 ಕೋಟಿ 31 ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ 5 ಲಕ್ಷದ 73 ಸಾವಿರ ದಾಟಿದೆ.

Published: 14th July 2020 12:53 AM  |   Last Updated: 14th July 2020 12:44 PM   |  A+A-


Diplomat from Philippines first known coronavirus case at U.N. in New York

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : AFP

ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದ್ದು, ಭಾನುವಾರ ಸಂಜೆ ವೇಳೆಗೆ ಜಾಗತಿಕ ಸೋಂಕಿತರ ಸಂಖ್ಯೆ 1 ಕೋಟಿ 31 ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ 5 ಲಕ್ಷದ 73 ಸಾವಿರ ದಾಟಿದೆ.

ವಿಶ್ವದ ಒಟ್ಟು 210 ದೇಶಗಳಲ್ಲಿ ಕೊರೊನಾ ಸೋಂಕು ವರದಿಯಾಗಿದ್ದು, ಅತಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಕರಣಗಳು ಅಮೆರಿಕದಲ್ಲೇ ವರದಿಯಾಗಿದೆ. ಇಲ್ಲಿ 34.38 ಲಕ್ಷ ಜನರಿಗೆ ಸೋಂಕು ತಗಲಿದ್ದರೆ ಈವರೆಗೆ 1 ಲಕ್ಷದ 37 ಸಾವಿರ ಜನರು ಮಾರಕ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ತಿಳಿಸಿದೆ. 

ಎರಡನೇ ಸ್ಥಾನದಲ್ಲಿರುವ ಬ್ರಿಜಿಲ್‌ನ ಒಟ್ಟು 18.66 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮೃತರ ಸಂಖ್ಯೆ 72 ಸಾವಿದ ದಾಟಿದೆ. ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 8.98 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 23 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಷ್ಯಾದಲ್ಲಿ 7.33 ಲಕ್ಷ ಸೋಂಕಿತರಿದ್ದು, ಪೆರು ದೇಶದಲ್ಲಿ 3.26 ಲಕ್ಷ ಸೋಂಕಿತರಿದ್ದಾರೆ. 

ಇನ್ನು ಪಾಕಿಸ್ತಾನದಲ್ಲಿ ಸೋಮವಾರ 2,769 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 2.51 ಲಕ್ಷ ದಾಟಿದೆ. 69 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸೋಂಕಿನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 5,226ಕ್ಕೆ ಏರಿಕೆಯಾಗಿದೆ. 1,837 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp